ಮೈಸೂರು : ಮಹಿಳೆಯರ ಮೇಲೆ ಅನಾದಿಕಾಲದಿಂದಲೂ ಗೌರವವಿದೆ. ಆದರೆ, ಇಲ್ಲೊಬ್ಬ ಮಹಿಳೆ ಮೈ ಮೇಲಿದ್ದ ಬಟ್ಟೆ ಕಳಚಿ ಪೊಲೀಸರ ಮುಂದೆ ಅಸಭ್ಯ ವರ್ತನೆ ತೋರಿರುವ ಘಟನೆ, ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಶಿರಮಳ್ಳಿ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ ಎಂದು ಮಾಧ್ಯಮ ಘೋಷ್ಠಿ ನಡೆಸಿದ ರತ್ನಮ್ಮ ಎಂಬಾಕೆ ಅನುಕಂಪ ಗಿಟ್ಟಿಸಿಕೊಂಡಿದ್ದಳು. ಬಹಿಷ್ಕಾರದ ವಿಚಾರವಾಗಿ ಮೈಸೂರು ಎಸ್ ಪಿ ಕಚೇರಿಗೂ ಕೂಡ ದೂರು ನೀಡಿದ್ದಳು.
ಇಂದು ಮಾಹಿತಿ ಸಂಗ್ರಹಿಸುವ ಸಲುವಾಗಿ ಶಿರಮಳ್ಳಿ ಗ್ರಾಮದ ರತ್ನಮ್ಮ ಮನೆಗೆ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿದ ಸಂಧರ್ಭದಲ್ಲಿ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಲೇ ಮಹಿಳೆ ಸೀರೆ ಬಿಚ್ಚಿದ್ದಾಳೆ ಅಸಭ್ಯವಾಗಿ ವರ್ತಿಸಿದ್ದಾಳೆ. ಸದ್ಯ, ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು ಮಹಿಳೆಯ ವಿರುದ್ದ ನೆಟ್ಟಿಗರು ಗರಂ ಆಗಿದ್ದಾರೆ.


















