ಧನ್ವೀರ್-ವಿಜಯಲಕ್ಷ್ಮಿ ವಾರ್ಗೆ ದರ್ಶನ್ ಪುತ್ರ ವಿನೀಶ್ ಎಂಟ್ರಿಯಾಗಿದ್ದಾರೆ. “ಕಾಡಿನ ಆರ್ಥಿಕತೆ ಎಷ್ಟೇ ಇರಲಿ, ಸಿಂಹ ಎಂದಿಗೂ ಹುಲ್ಲು ತಿನ್ನುವುದಿಲ್ಲ” ಎಂದು ವಿನೀಶ್ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದಾರೆ. ಈ ಪೋಸ್ಟ್ ಈಗ ಭಾರೀ ವೈರಲ್ ಆಗಿದೆ. ಇದರೊಂದಿಗೆ ಸುದೀಪ್ ಅವರ ಹಳೆಯ ಸ್ಟೇಟ್ಮೆಂಟ್ ಕೂಡ ವೈರಲ್ ಆಗುತ್ತಿದೆ.
ಇಂದು ನಟ ಧನ್ವೀರ್ ವಿಚಾರಣೆ ಸಾಧ್ಯತೆ ಇದೆ. ರಾಜಾಜಿನಗರ ಪೊಲೀಸರು ಧನ್ವೀರ್ಗೆ ನೋಟಿಸ್ ನೀಡಿದ್ದಾರೆ. ವಾಟ್ಸ್ ಆಪ್ ಮೆಸೇಜ್ ಪರಿಶೀಲನೆ ನಡೆಯಲಿದೆ. ಧನ್ವೀರ್ ತಂದೆ ದೂರಿನನ್ವಯ ವಿಜಯಲಕ್ಷ್ಮಿಗೂ ರಾಜಾಜಿನಗರ ಪೊಲೀಸರು ನೋಟಿಸ್ ನೀಡಿದ್ದಾರೆ.



















