ಬೆಳಗಾವಿ : ಸ್ಮಶಾನಕ್ಕೆ ದಾರಿ ಇಲ್ಲದೆ ನಡು ರಸ್ತೆಯಲ್ಲಿ ಮೃತದೇಹವಿಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಿಂಗದಾಳ ಗ್ರಾಮದಲ್ಲಿ ನಡೆದಿದೆ.
ಸ್ಮಶಾನಕ್ಕೆ ಮೃತದೇಹ ತೆಗೆದುಕ್ಕೊಂಡು ಹೋಗುವಾಗ ದಾರಿ ಇಲ್ಲದೆ ಪರದಾಡುತ್ತಿ ಗ್ರಾಮಸ್ಥರಿಗೆ, ಸ್ವಂತ ಜಮೀನಿನಲ್ಲಿ ರೈತರೊಬ್ಬರು ದಾರಿ ಬಿಟ್ಟುಕ್ಕೊಟ್ಟಿದ್ದಾರೆ. ಮೊದಲಿನಿಂದಲೂ ಸ್ಮಶಾನಕ್ಕೆ ಹೋಗುವ ದಾರಿ ಇದಾಗಿದ್ದು. ಸರ್ವೆ ಮಾಡಿದಾಗ ದಾರಿ ರೈತನ ಜಮೀನು ಸೇರಿದ್ದ ಹಿನ್ನಲೆ ರೈತ ದಾರಿ ಬಂದ ಮಾಡಿದ್ದ.
ಈ ಹಿನ್ನೆಲೆ, ಗ್ರಾಮಸ್ಥರು ಹಲವಾರು ವರ್ಷಗಳಿಂದ ದಾರಿ ಮಾಡಿಕೊಡುವಂತೆ ತಹಶಿಲ್ದಾರಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಬೇಡಿಕೆಗೆ ತಹಶಿಲ್ದಾರರ ಸ್ಪಂದಿಸದ ಕಾರಣ ಇಂದು ಮೃತದೇಹವನ್ನು ನಡುರಸ್ತೆಯಲ್ಲಿ ಇಟ್ಟುಕ್ಕೊಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರನ್ನ ಸ್ಥಳೀಯರು ತರಾಟೆ ತೆಗದುಕ್ಕೊಂಡಿದ್ದಾರೆ. ಈ ಘಟನೆ ಸುರೇಬಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ | ವಿಜಯೇಂದ್ರ ಆರೋಪಕ್ಕೆ ಗುಂಡೂರಾವ್ ತಿರುಗೇಟು



















