ನವದೆಹಲಿ : ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಏ.16) ಎರಡು ವಿಮಾನಗಳ ನಡುವ ಡಿಕ್ಕಿ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ.
ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಆಕಾಸ ಏರ್ ವಿಮಾನಕ್ಕೆ ಸ್ಪೈಸ್ ಜೆಟ್ ವಿಮಾನ ಡಿಕ್ಕಿ ಹೊಡೆದಿದೆ. ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದಾಗ ನಿಂತಿದ್ದ ಆಕಾಸ ಏರ್ ವಿಮಾನದ ರೆಕ್ಕೆಗೆ ಸ್ಪೈಸ್‌ಜೆಟ್ ವಿಮಾನ ಡಿಕ್ಕಿ ಹೊಡೆದಿದ್ದು, ಆಕಾಸ ಏರ್ ವಿಮಾನದ ಎಡ ಭಾಗದ ರೆಕ್ಕೆ, ಸ್ಪೈಸ್ ಜೆಟ್‌ನ ಬಲ ಭಾಗದ ರೆಕ್ಕೆಗೆ ಹಾನಿಯಾಗಿದೆ.
ಡಿಕ್ಕಿ ಹೊಡೆದ ಪ್ರಮಾಣ ಸಣ್ಣದಾಗಿತ್ತು, ಆದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಹಾನಿಗೆ ಒಳಗಾದ ಆಕಾಸ ಏರ್ ವಿಮಾನವು (ಸಂಖ್ಯೆ QP 1406) ದೆಹಲಿಯಿಂದ ಹೈದರಾಬಾದ್‌ಗೆ ಹಾರುತ್ತಿತ್ತು ಎಂದು ಆಕಾಸ ಏರ್ ತಿಳಿಸಿದೆ.
ಇದನ್ನೂ ಓದಿ : ನಡುರಸ್ತೆಯಲ್ಲೇ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್.. ಅರಣ್ಯಕ್ಕೂ ವ್ಯಾಪಿಸಿದ ಬೆಂಕಿ!



















