ಕೋಲಾರದಲ್ಲಿ ಆಯೋಜಿಸಿದ್ದ ಬಿಜೆಪಿ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಪ್ರಮುಖ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಸ್ಟಿಂಗ್ ಪ್ರಕರಣದ ನಂತರ ರಾಜಕೀಯ ಬದಲಾಗಿದ್ದು, ಮೊನ್ನೆ ನಡೆದ ಎಂಎಲ್‌ಸಿ ಎಲೆಕ್ಷನ್‌ನಲ್ಲಿ ಅಹಿಂದ ವರ್ಗ ಕಾಂಗ್ರೆಸ್‌ಗೆ ಮತ ನೀಡಿಲ್ಲ ಎಂದಿದ್ದಾರೆ.
ಕಾಂಗ್ರೆಸ್‌ನವರೇ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಿದ್ದಾರೆ ಹಾಗೂ ಸ್ಟಿಂಗ್ ಪ್ರಕರಣದಿಂದ ಅಹಿಂದ ವರ್ಗದ ಮತಗಳು ಗೊಂದಲಕ್ಕೆ ಸಿಲುಕಿವೆ ಎಂದು ಅವರು ತಿಳಿಸಿದ್ದಾರೆ. ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ತಾವು 2028ಕ್ಕೆ ಶಾಸಕನಾಗಿ ಮಂತ್ರಿ ಆಗುವುದಾಗಿ ವರ್ತೂರು ಪ್ರಕಾಶ್ ಹೇಳಿದ್ದಾರೆ.


















