ಉಡುಪಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಶೇ. 79ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 3,62,093 ಮನೆಗಳ ಗಣತಿ ನೆಡೆಯಬೇಕಿದ್ದು, ನಿನ್ನೆ (ಶನಿವಾರ) ಸಂಜೆಯವರೆಗೆ 2,49,065 ಮನೆಗಳ ಗಣತಿ ಕಾರ್ಯ ಪೂರ್ಣಗೊಂಡಿದೆ. ಈ ಕುರಿತಂತೆ ಉಡುಪಿ ಜಿಲ್ಲಾಡಳಿತ ಮಾಹಿತಿಯನ್ನು ನೀಡಿದ್ದು, ಒಂದು ವೇಳೆ ನಿಮ್ಮ ಮನೆಗಳಿಗೆ ಗಣತಿದಾರರು ಬರದೇ ಇದ್ದಲ್ಲಿ ಈ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಲಾಗಿದೆ.
ಉಡುಪಿ /ಬ್ರಹ್ಮಾವರ /ಕಾಪು ತಾಲ್ಲೂಕಿನವರು – 0820-2520739, ಕುಂದಾಪುರ/ಬೈಂದೂರು ತಾಲ್ಲೂಕಿನವರು – 9972294198, ಹಾಗೆಯೇ ಕಾರ್ಕಳ /ಹೆಬ್ರಿ ತಾಲ್ಲೂಕಿನವರು 08258-298610 ಸಹಾಯವಾಣಿಗೆ ಸಂಪರ್ಕಿಸಿ ಎಂದು ಜಿಲ್ಲಾಡಳಿತ ತಿಳಿಸಿದೆ.



















