ಉಡುಪಿ : ಜಿಲ್ಲೆಯ ಕಾಪು ಸಾಯಿ ಸರ್ವಿಸ್ ಸ್ಟೇಷನ್ ಬಳಿ ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಬಸ್ಸೊಂದು ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ತಂದೆಯೊಂದಿಗೆ ಸಂಚರಿಸುತ್ತಿದ್ದ 8 ವರ್ಷದ ಬಾಲಕಿ ಸಾತ್ವಿ ಶೆಟ್ಟಿ ತೀವ್ರ ಗಾಯಗೊಂಡು ಮೃತಪಟ್ಟಿದ್ದಾಳೆ.
ಮೃತ ಸಾತ್ವಿ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾಳೆ. ದುಬೈಯಲ್ಲಿ ವಾಸವಿದ್ದ ಈ ಕುಟುಂಬವು ಮುಂದೆ ಊರಿನಲ್ಲಿಯೇ ನೆಲೆಸುವ ಸಿದ್ಧತೆ ನಡೆಸಿತ್ತು.
ಹಾಗಾಗಿ ಸಾತ್ವಿಗಾಗಿ ನಿನ್ನೆ ಆಕೆಯ ಹೆತ್ತವರು ಉಡುಪಿಯ ಖಾಸಗಿ ಶಾಲೆಯಲ್ಲಿ ಪ್ರವೇಶಾತಿಯನ್ನೂ ಮುಗಿಸಿದ್ದರು. ಇಂದು ಆಕೆಯ ತಂದೆ ನಿತ್ಯಾನಂದ ಶೆಟ್ಟಿ ಅವರು ಮಾತ್ರ ದುಬಾಯಿಗೆ ತೆರಳುವರಿದ್ದು, ಕಾಪು ಪೇಟೆಗೆ ಏನನ್ನೋ ತರಲು ಹೋಗಿ ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಲಂಚ ಸ್ವೀಕರಿಸುತ್ತಿದ್ದಾಗಲೇ ‘ಲೋಕಾ’ ಬಲೆಗೆ ಬಿದ್ದ ಎಸ್‌ಡಿಎ ಸಿಬ್ಬಂದಿ!



















