ಧಾರವಾಡ : ಶನಿ ಅಮಾವಾಸ್ಯೆ ಹಿನ್ನೆಲೆ ಧಾರವಾಡದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಭಕ್ತಿಭಾವದಿಂದ ನೆರವೇರಿದವು.
ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ಶನೇಶ್ವರನ ದರ್ಶನ ಪಡೆಯಲು ಭಕ್ತರ ದಂಡು ಹರಿದುಬಂದಿತು. ಎಳ್ಳು ದೀಪ ಹಚ್ಚಿ ಶನೇಶ್ವರನಿಗೆ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸರತಿ ಸಾಲಿನಲ್ಲಿ ನಿಂತು ಭಕ್ತರು ಶನೇಶ್ವರನ ದರ್ಶನ ಪಡೆದರು. ಅಲ್ಲದೇ ದೇವಸ್ಥಾನದಲ್ಲಿ ನಡೆದ ಗಣ ಹೋಮ ಹಾಗೂ ರುದ್ರ ಹೋಮದಲ್ಲಿ ಸಹ ಭಕ್ತರು ಭಾಗಿಯಾಗಿ ಪೂಜೆ ಸಲ್ಲಿಸಿದರು.


















