ತಾಯಿಗೆ ಮಕ್ಕಳೇ ಪ್ರಪಂಚ. ತಾಯಿಯ ಮಡಿಲು ಮಗುವಿನ ಪ್ರಪಂಚ. ಆದರೆ ಇಲ್ಲೊಬ್ಬಳು ತಾಯಿ ತನ್ನ ಮಗುವಿನ ಮೇಲೆ ಕುಳಿತು, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಅಮೆರಿಕದಲ್ಲಿ ಈ ಘಟನೆ ನಡೆದಿದೆ. ಆರೋಪಿ ಮಹಿಳೆಯನ್ನು ಜೆನಿಫರ್ ವಿಲ್ಸನ್(48) ಎಂದು ಗುರುತಿಸಲಾಗಿದೆ. ಆದರೆ, ಈಕೆ ತಾಯಿಯಲ್ಲ. ಬಾಲಕನ ಮಲತಾಯಿ ಎನ್ನಲಾಗಿದೆ. ಘಟನೆಯ ಸುದ್ದಿ ಕೇಳಿ ಇಡೀ ವಿಶ್ವವೇ ಮಮ್ಮಲ ಮರಗುತ್ತಿದೆ. ಡಕೋಟಾ ಸ್ಟೀವನ್ಸ್(10) ಕೊಲೆಯಾದ ಬಾಲಕ.
ಈ ಮಗು ಪಕ್ಕದ ಮನೆಗೆ ಹೆಚ್ಚಾಗಿ ಹೋಗುತ್ತಿತ್ತು ಎನ್ನಲಾಗಿದ್ದು, ಅದನ್ನು ತಪ್ಪಿಸಲು ಉಸಿರು ಗಟ್ಟಿಸಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿದೆ. ಬಾಲಕ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಗೋಳಾಡಿದರೂ 150 ಕೆಜಿ ತೂಕದ ಈ ಮಹಿಳೆ ಮೇಲೆ ಏಳದೆ ಆತನ ಮೇಲೆ ಕುಳಿತಿದ್ದಾಳೆ. ಇದರಿಂದಾಗಿ ಮಗು ಉಸಿರು ಕಟ್ಟಿ ಸಾವನ್ನಪ್ಪಿದ್ದಾನೆ. ಆನಂತರ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.