ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ನಮ್ಮ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಭಾರತೀಯ ಹೆಣ್ಣು ಮಕ್ಕಳ ಸಿಂಧೂರವನ್ನು ಅಳಿಸಿದ ಉಗ್ರರಿಗೆ ಯೋಧರು ತಕ್ಕ ಪಾಠ ಕಲಿಸಿದ್ದಾರೆ. ಆಪರೇಷನ್ ಸಿಂಧೂರ ಹೆಸರಲ್ಲಿ ಏರ್ಸ್ಟ್ರೈಕ್ ಮಾಡಿದ ನಮ್ಮ ಭಾರತೀಯ ಸೈನಿಕರಿಗೆ ಈಗಾಗಲೇ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಅದೇ ರೀತಿ ಸಿಸು ಸೇವಾಶ್ರಮ ಹಾಗೂ ವಾಲಕರ್ ಅಸೋಸಿಯೇಷನ್ ಮಕ್ಕಳು ಡ್ರಾಯಿಂಗ್ ಮೂಲಕ ದೇಶದ ಸೈನಿಕರಿಗೆ ಸೆಲ್ಯೂಟ್ ಮಾಡಿದ್ದಾರೆ. ಸೆಲ್ಯೂಟ್ ಎನ್ನುವ ಬೋರ್ಡ್ ಹಿಡಿದು ಯೋಧರಿಗೆ ಈ ಪುಟ್ಟ ಕಂದಮ್ಮಗಳು ಸೆಲ್ಯೂಟ್ ಮಾಡಿದ್ದಾರೆ.