ಬೆಂಗಳೂರು: ದೇಶದಲ್ಲಿ ಮಸಾಲೆಗಳ ಉತ್ಪಾದನೆ, ಅಭಿವೃದ್ಧಿ ಮತ್ತು ರಫ್ತನ್ನು ಪ್ರೋತ್ಸಾಹಿಸಲು ಸ್ಥಾಪಿಸಲಾದ, ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮಸಾಲೆಗಳ ಮಂಡಳಿಯಲ್ಲಿ (Spices Board Recruitment 2026) ಖಾಲಿ ಇರುವ 21 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆಫ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಮಸಾಲೆ ಪದಾರ್ಥಗಳ ಮಂಡಳಿ
ಹುದ್ದೆ ಹೆಸರು: ಟ್ರೈನಿ
ಒಟ್ಟು ಹುದ್ದೆ: 21
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 31
ಅರ್ಜಿ ಸಲ್ಲಿಕೆಯ ವಿಧಾನ: ಆಫ್ ಲೈನ್
ಉದ್ಯೋಗ ಸ್ಥಳ: ಕರ್ನಾಟಕ ಸೇರಿ ದೇಶದ ಹಲವೆಡೆ
ಕರ್ನಾಟಕದ ಉತ್ತರ ಕನ್ನಡ, ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳಿವೆ. ಉಳಿದಂತೆ, ಸಿಕ್ಕಿಂ, ಬಿಹಾರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಸೇರಿ ಹಲವೆಡೆ ನೇಮಕಾತಿ ನಡೆಯುತ್ತಿದೆ. ದೇಶದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು ಗರಿಷ್ಠ 35 ವರ್ಷದೊಳಗಿನವರು ಆಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನೇಮಕಾತಿ ಹೊಂದಿದವರಿಗೆ ಮಾಸಿಕ 20 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ. ಸಲ್ಲಿಕೆಯಾದ ಅರ್ಜಿಗಳನ್ನು ಮೊದಲು ಪರಿಶೀಲನೆ ಮಾಡಲಾಗುತ್ತದೆ. ಇದಾದ ಬಳಿಕ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸುವವರು ಮೊದಲಿಗೆ indianspices.com ಭೇಟಿ ನೀಡಿ ಅಧಿಸೂಚನೆ ಓದಬೇಕು. ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಗಳಿಗೆ ಕಳುಹಿಸಬೇಕು.
ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಬೇಕಾದ ವಿಳಾಸಗಳು
F.O. Vanagur – Karnataka:Spices Board, Regional Office, Near Rotary School, Lakshmipura Extension, District Hassan – 573134.
Departmental Nursery, Yeslur – Karnataka:Spices Board, Regional Office, Near Rotary School, Lakshmipura Extension, District Hassan – 573134.
Departmental Nursery, Biligeri – Karnataka:Spices Board, Regional Office, Near Rotary School, Lakshmipura Extension, District Hassan – 573134.
F.O. Sirsi – Karnataka:Spices Board, Regional Office, Near Rotary School, Lakshmipura Extension, District Hassan – 573134.
F.O. Madikeri – Karnataka: Spices Board, Regional Office, Near Rotary School, Lakshmipura Extension, District Hassan – 573134.
Departmental Nursery, Bettadamane – Karnataka: Spices Board, Regional Office, Near Rotary School, Lakshmipura Extension, District Hassan – 573134.
ಇದನ್ನೂ ಓದಿ :1 ಲಕ್ಷ ರೂ. ಹೂಡಿಕೆಗೆ 2 ಲಕ್ಷ ರೂ. ಗಳಿಕೆ : ಏನಿದು ಅಂಚೆ ಕಚೇರಿಯ ಯೋಜನೆ?


















