ಡೆಹ್ರಾಡೂನ್ ಮೂಲದ ಪ್ರವೀಣ್ ಮಿತ್ತಲ್ ಕುಟುಂಬ ಇಲ್ಲಿನ ಪಂಚ್ ಕುಲಾ ಬಳಿ ಕಾರಿನಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಮೊನ್ನೆ ಹನುಮಾನ್ ಪಠಣಕ್ಕೆ ಅಂತಾ ಡೆಹ್ರಾಡೂನ್ ನಿಂದ ಪಂಚಕುಲಾಕ್ಕೆ ಬಂದಿದ್ದ ಕುಟುಂಬವೀಗ ಏಕಾಏಕಿ ಮೃತರೂಪದಲ್ಲಿ ಪತ್ತೆಯಾಗಿದ್ದಾರೆ.

42 ವರ್ಷದ ಪ್ರವೀಣ್ ಮಿತ್ತಲ್ ಆತನ ತಂದೆ, ತಾಯಿ, ಪತ್ನಿ ಮತ್ತು ಮೂವರು ಮಕ್ಕಳು ಕಾರಿನಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಅಸಲಿಗೆ ಹನುಮಾನ್ ಪಠಣ ಮುಗಿಸಿಕೊಂಡ ಕುಟುಂಬ ಪಂಚಕುಲಾದ ಮನೆಯೊಂದರ ಮುಂದೆ ಕಾರ್ ಪಾರ್ಕ್ ಮಾಡಿದೆ. ಈ ಮಾರ್ಗದಲ್ಲಿ ಹಾದು ಹೋದವರ ಹೇಳಿಕೆ ದಾಖಲಿಸಿರೋ ಪೊಲೀಸರು, ಕುಟುಂಬ ಸದಸ್ಯರು ಕಾರಿನಲ್ಲಿ ನರಳುತ್ತಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ರು. ಇದಕ್ಕೆ ಸ್ಪಂದಿಸಿದ ಖಾಕಿ ಪಡೆ ಸ್ಥಳಕ್ಕಾಗಮಿಸಿ ಕಾರಿನಲ್ಲಿದ್ದವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಿದ್ರೂ ಆ ಹೊತ್ತಿಗಾಗಲೇ ಏಳು ಮಂದಿ ಜೀವ ಹಾರಿಹೋಗಿತ್ತು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೇಲ್ನೋಟಕ್ಕೆ ಆತ್ಮಹತ್ಯೆ ಅಂತಾ ಶಂಕಿಸಿದ್ರೂ, ಸಾವು ಸಂಭವಿಸಿದ್ದು ಹೇಗೆ ಅನ್ನೋದು ಸ್ಪಷ್ಟವಾಗಬೇಕಿದೆ. ಅಷ್ಟೇ ಅಲ್ಲದೆ ಕೊಲೆಯ ದೃಷ್ಟಿಯಿಂದಲೇ ತನಿಖೆಯನ್ನು ಆರಂಭಿಸಲಾಗಿದ್ದು, ಸ್ಥಳದಲ್ಲಿ ಡೆತ್ ನೋಟ್ ಕೂಡಾ ಪತ್ತೆಯಾಗಿದೆ.