ಫುಟ್ಬಾಲ್ ಅಂಗಳದ ಚತುರ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಐತಿಹಾಸಿಕ ದಾಖಲೆ ಮಾಡಿದ್ದಾರೆ.
ಫುಟ್ಬಾಲ್ ಲೋಕದಲ್ಲಿ ಇಲ್ಲಿಯವರೆಗೆ ಯಾವ ಆಟಗಾರನೂ ಮಾಡಲಾಗದ ಸಾಧನೆಯನ್ನು ರೊನಾಲ್ಡೊ ಮಾಡಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ರೊನಾಲ್ಡೊ ತಮ್ಮ ವೃತ್ತಿ ಜೀವನದ 900ನೇ ಗೋಲು ಬಾರಿಸುವ ಮೂಲಕ ಫುಟ್ಬಾಲ್ ಅಂಗಳದಲ್ಲಿ ಇಷ್ಟೊಂದು ಗೋಲು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೇಷನ್ ಲೀಗ್ ನಲ್ಲಿ ನಡೆದ ಪೋರ್ಚುಗಲ್ ಮತ್ತು ಕ್ರೊಯೇಷಿಯಾ ನಡುವಿನ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು ಪ್ರತಿನಿಧಿಸಿದ ರೊನಾಲ್ಡೊ, ಪಂದ್ಯದ 34 ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಫುಟ್ಬಾಲ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ್ದಾರೆ.
ಈ ಗೋಲಿನೊಂದಿಗೆ ರೊನಾಲ್ಡ್, ಕ್ಲಬ್ ಮತ್ತು ದೇಶದ ಪರ ಆಡುವುದನ್ನು ಸೇರಿದಂತೆ ತಮ್ಮ ವೃತ್ತಿಜೀವನದ 900 ಗೋಲುಗಳನ್ನು ಅವರು ಪೂರ್ತಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ 131 ಗೋಲು ಗಳಿಸಿ ರೊನಾಲ್ಡೊ ಅಗ್ರ ಸ್ಥಾನದಲ್ಲಿದ್ದಾರೆ.


















