ಭಾರತೀಯ ರೈಲ್ವೆ ಗುರುವಾರದಿಂದಲೇ ಅನ್ವಯವಾಗವಂತೆ ಕೆಲ ಮಹತ್ತರ ಬದಲಾವಣೆಗಳನ್ನು ತಂದಿದೆ. ಇನ್ನು ಮುಂದೆ ಪ್ರಯಾಣಿಕರ ಟಿಕೆಟ್ ವೇಯ್ಟಿಂಗ್ ಲಿಸ್ಟ್ ನಲ್ಲಿದ್ದರೆ ಅಂಥವರು ಕಾಯ್ದಿರಿಸಿದ ಬೋಗಿಗಳಿಗೆ ಎಂಟ್ರಿ ಕೊಡುವಂತಿಲ್ಲ.
ಎಸಿ ಅಥವಾ ನಾನ್ ಎಸಿ ಇಲ್ಲಾ ಸ್ಲೀಪರ್ ಬೋಗಿಗಳಿಗೆ ವೇಯ್ಟಿಂಗ್ ಟಿಕೆಟ್ ಇದ್ದವರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಈ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಿ ಪ್ರಯಾಣಿಸುತ್ತಿರುವವರಿಗೆ ಆಗುತ್ತಿದ್ದ ಮುಜುಗರವನ್ನು ತಪ್ಪಿಸಲಾಗುತ್ತಿದೆ. ನಿಮ್ಮ ಟಿಕೆಟ್ ಖಾಯಂ ಆಗದಿದ್ದರೆ ಅಂಥವರು ಇನ್ಮುಂದೆ ಕಡ್ಡಾಯವಾಗಿ ಸಾಮಾನ್ಯ ಬೋಗಿಗಳಲ್ಲಿ ಮಾತ್ರ ಸಂಚರಿಸಬೇಕು.
ನಿಯಮ ಉಲ್ಲಂಘಿಸಿದರೆ ದೊಡ್ಡ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಅಷ್ಟೇ ಅಲ್ಲಾ ಪ್ರಯಾಣಕ್ಕೆ 90 ದಿನ ಮುಂಚಿತವಾಗಿ ಮಾತ್ರ ಟಿಕೆಟ್ ಕಾಯ್ದಿರಿಸುವ ಅವಕಾಶ ನೀಡಲಾಗಿದೆ. ಈ ಮೊದಲು ಈ ಅವಕಾಶ 120 ದಿನಗಳವರೆಗೂ ಇತ್ತು. ಆದರೆ, ಟಿಕೆಟ್ ಬುಕ್ಕಿಂಗ್ ಮಾಫಿಯಾ ಹಾವಳಿ ತಪ್ಪಿಸಲು ರೈಲ್ವೆ ಇಲಾಖೆ ಈ ತೀರ್ಮಾನ ಕೈಗೊಂಡಿದೆ. ಅಷ್ಟೇ ಅಲ್ಲಾ ಈ ನಿಯಮ ಮೇ 1ರಿಂದಲೇ ಜಾರಿಗೆ ಬಂದಿದೆ.