ಬೆಂಗಳೂರು: ಲೋಕಸಭೆಯಲ್ಲಿ ಮತದಾನ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಆರೋಪಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ರಾಹುಲ್ ಗಾಂಧಿಗೆ ಇನ್ನೂ ರಾಜಕೀಯ ಮೆಚ್ಯುರಿಟಿ ಇಲ್ಲ ಎಂದು ವ್ಯಂಗ್ಯವಾಡಿದ್ದಲ್ಲದೇ, ಕರ್ನಾಟಕದಲ್ಲಿ ಅಕ್ರಮವಾಗಿದೆ. ಅದಕ್ಕಾಗಿ ಕಾಂಗ್ರೆಸ್ ಗೆ ಚುನಾವಣೆಯಲ್ಲಿ 136 ಸೀಟ್ ಬಂದಿದೆ. ತೆಲಂಗಾಣದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಲ್ಲೂ ಅಕ್ರಮವಾಗಿದೆ. ಅಲ್ಲಿಯೂ ತನಿಖೆ ಮಾಡಬೇಕು. ಅಲ್ಲಿಯೂ ಉಪ ಚುನಾವಣೆ ಮಾಡುತ್ತಾರೆಯೇ ? ಎಂದು ಪ್ರಶ್ನಿಸಿದ್ದಾರೆ.
ನೀವು ಗೆದ್ದಲ್ಲಿ ಅಕ್ರಮವಿಲ್ಲ. ನೀವು ಸೋತಿರುವ ಕಡೆಗಳಲ್ಲಿ ಅಕ್ರಮವಾಗಿದೆಯೇ ? ಬ್ಯಾಲೆಟ್ ಪೇಪರ್ ಬೇಕೆಂದು ಹೇಳುತ್ತಾರೆ. ಓಟಿಂಗ್ ಮಷಿನ್ ತಂದವರು ಯಾರು..? ಎಲೆಕ್ಟ್ರಾನಿಕ್ ಓಟಿಂಗ್ ತಂದಿದ್ದು ಬಿಜೆಪಿಯವರು ? ಮನಮೋಹನ್ ಸಿಂಗ್ ಇರುವಾಗಲೆಲ್ಲಾ ಓಟಿಂಗ್ ನಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.



















