ಹಾಲಿನ ದರ ಲೀಟರ್‌ಗೆ 8 ರಿಂದ 12 ರೂಪಾಯಿ ಹಾಗೂ ಮೊಸರಿನ ದರ 14 ರೂಪಾಯಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ನಗರದ ಕಾಂಡಿಮೆಂಟ್ಸ್‌ಗಳಲ್ಲಿ ಮಾಲೀಕರು ಟೀ ಮತ್ತು ಕಾಫಿ ದರವನ್ನು ಏರಿಸಿದ್ದಾರೆ. ಈ ಕುರಿತು ಬೆಂಗಳೂರು ಕಾಂಡಿಮೆಂಟ್ಸ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಪ್ರತಾಪ್ ಹೇಳಿಕೆ ನೀಡಿದ್ದು, ಹೋಟೆಲ್ ಪರಿಸ್ಥಿತಿ ಅತಂತ್ರವಾಗಿದ್ದು ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದಿದ್ದಾರೆ.
ದರ ಏರಿಕೆ ಮಾಡಿದರೆ ಹೋಟೆಲ್‌ಗೆ ಜನ ಬರುವುದಿಲ್ಲ, ದರ ಏರಿಸದಿದ್ದರೆ ಹೋಟೆಲ್ ನಡೆಸಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ. ಕಾಂಡಿಮೆಂಟ್ಸ್‌ಗಳಲ್ಲಿ ಟೀ-ಕಾಫಿ ಕುಡಿಯುವವರು ಬಡವರಾಗಿದ್ದು, ಬೆಲೆ ಹೆಚ್ಚಳದಿಂದ ಅವರಿಗೆ ಸಮಸ್ಯೆಯಾಗಲಿದೆ. ಆದರೂ ಪ್ರಸ್ತುತ ದರದಲ್ಲಿ ಟೀ-ಕಾಫಿ ನೀಡಲು ಸಾಧ್ಯವಿಲ್ಲದ ಕಾರಣ ದರ ಏರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.


















