ಬೆಂಗಳೂರು : ಸುರಕ್ಷತೆಯ ಹೂಡಿಕೆ ಮಾಡುವವರಿಗೆ, ನಿಶ್ಚಿತ ಆದಾಯ ಬಯಸುವವರಿಗೆ ಕೇಂದ್ರ ಸರ್ಕಾರದ ಬೆಂಬಲ ಇರುವ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್- PPF Scheme) ಯೋಜನೆಯು ಉತ್ತಮವಾಗಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ಸುರಕ್ಷಿತ ದೀರ್ಘಾವಧಿಯ ಹೂಡಿಕೆ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಒಂದಾಗಿದೆ. ತೆರಿಗೆ ವಿನಾಯಿತಿ ಮತ್ತು ಆಕರ್ಷಕ ಬಡ್ಡಿ ದರದ ಕಾರಣದಿಂದಾಗಿ, ಇದು ಮಧ್ಯಮ ವರ್ಗದ ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ.
ಪಿಪಿಎಫ್ ಯೋಜನೆಯಲ್ಲಿ ವರ್ಷಕ್ಕೆ ಕೇವಲ 25 ಸಾವಿರ ರೂಪಾಯಿ ಹೂಡಿಕೆ ಮಾಡಿದರೂ 15 ವರ್ಷಗಳ ಬಳಿಕ ಹೂಡಿಕೆಯ ಹಣ ಡಬಲ್ ಆಗಲಿದೆ. ಹೌದು, ಪಿಪಿಎಫ್ ಹೂಡಿಕೆಗೆ ವಾರ್ಷಿಕ ಶೇ.7.1ರಷ್ಟು ಬಡ್ಡಿ ಲಭಿಸುತ್ತದೆ. ವರ್ಷಕ್ಕೆ 25 ಸಾವಿರ ರೂ.ನಂತೆ 15 ವರ್ಷ ಹೂಡಿಕೆ ಮಾಡಿದರೆ, ನಿಮ್ಮ ಹೂಡಿಕೆ ಮೊತ್ತವು 3.75 ಲಕ್ಷ ರೂಪಾಯಿ ಆಗುತ್ತದೆ. ಇದಕ್ಕೆ ಬಡ್ಡಿ ಆದಾಯವೇ 3.03 ಲಕ್ಷ ರೂ. ಲಭಿಸುವುದರಿಂದ ನಿಮಗೆ ಒಟ್ಟು 6.78 ಲಕ್ಷ ರೂಪಾಯಿ ಲಭಿಸುತ್ತದೆ. ಅಂದರೆ, ನೀವು ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚುವರಿಯಾಗಿಯೇ 3 ಲಕ್ಷ ರೂಪಾಯಿ ಬಡ್ಡಿ ಆದಾಯ ಲಭಿಸುತ್ತದೆ.
ಪಿಪಿಎಫ್ ಹೇಗೆಲ್ಲ ಅನುಕೂಲ?
• ತೆರಿಗೆ ವಿನಾಯಿತಿ: ಪಿಪಿಎಫ್ ನಲ್ಲಿ ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿ ಸಿಗುತ್ತದೆ. ಜತೆಗೆ, ಗಳಿಸುವ ಬಡ್ಡಿ ಮತ್ತು ಮೆಚ್ಯೂರಿಟಿ ಸಮಯದಲ್ಲಿ ಸಿಗುವ ಮೊತ್ತ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.
• ಸುರಕ್ಷತೆ: ಇದು ಸರ್ಕಾರಿ ಬೆಂಬಲಿತ ಯೋಜನೆಯಾಗಿರುವುದರಿಂದ, ಹೂಡಿಕೆಗೆ ನೂರಕ್ಕೆ ನೂರು ಸುರಕ್ಷತೆ ಇರುತ್ತದೆ.
• ಚಕ್ರಬಡ್ಡಿ ಲಾಭ: ದೀರ್ಘಾವಧಿಯಲ್ಲಿ ಹೂಡಿಕೆ ಮಾಡುವುದರಿಂದ ಚಕ್ರಬಡ್ಡಿಯು ನಿಮ್ಮ ಹೂಡಿಕೆ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
• ಕನಿಷ್ಠ: ನೀವು ವರ್ಷಕ್ಕೆ ಕನಿಷ್ಠ 500 ರೂಪಾಯಿಯಿಂದ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು.
ಇದನ್ನೂ ಓದಿ : ಭಾರತ-ಪಾಕ್ ಪಂದ್ಯಕ್ಕೂ ಮುನ್ನ ‘ಹಸ್ತಲಾಘವ’ ವಿವಾದದ ಕುರಿತು ಮೌನ ಮುರಿದ ಹರ್ಮನ್‌ಪ್ರೀತ್



















