ಬೆಂಗಳೂರು : ಬೆಂಗಳೂರಿನ ಹಲವು ಪ್ರಮುಖ ಬಡಾವಣೆಗಳಲ್ಲಿ ಇಂದು ಮತ್ತು ನಾಳೆ (ಜೂನ್ 22 ಮತ್ತು ಜೂನ್ 23) ಸುದೀರ್ಘ ಅವಧಿಯ ವಿದ್ಯುತ್ ಕಡಿತ ಇರಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಅಧಿಕೃತ ಮಾಧ್ಯಮ ಪ್ರಕಟಣೆ ಹಾಗೂ ಎಕ್ಸ್ ಪೋಸ್ಟ್ ಮೂಲಕ ನಾಗರಿಕರಿಗೆ ಮಾಹಿತಿ ನೀಡಿದೆ. ತುರ್ತು ಮೂಲಸೌಕರ್ಯ ಕಾಮಗಾರಿ ಹಾಗೂ ನಿಯತಕಾಲಿಕ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಕಾಮಗಾರಿಗಳ ಕಾರಣದಿಂದಾಗಿ ನಗರದ ವಿವಿಧ ವಲಯಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಸ್ಕಾಂ ಮಾಹಿತಿ ನೀಡಿರುವ ಪ್ರಕಾರ, ಜೂನ್ 22 ರ ಸೋಮವಾರದಂದು ಬೆಳಿಗ್ಗೆ 9 ರಿಂದ ಸರಿಸುಮಾರು 7 ಗಂಟೆಗಳ ಕಾಲ ನಿಗದಿತ ಪವರ್ ಕಟ್ ಜಾರಿಯಲ್ಲಿರಲಿದೆ.
ಜೂನ್ 22 ರಂದು ಎಲ್ಲೆಲ್ಲಿ ಪವರ್ ಕಟ್?
ಸೋಲದೇವನಹಳ್ಳಿ-ಹೆಸರಘಟ್ಟ ಸುತ್ತಮುತ್ತಲಿನ ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿ.ಬಿ. ಕ್ರಾಸ್, ಹೆಸರಘಟ್ಟ, ಬಿಲಿಜಾಜಿ ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಬ್ರದರ್ಸ್ ಕಾಲೋನಿ, ಕೃಷ್ಣ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ, ಶಿವಕುಮಾರಸ್ವಾಮೀಜಿ ಲೇಔಟ್, ಸಿಡಿಪಿಒ, ಡ್ಯಾನಿಶ್ ಫಾರ್ಮ್, ಕೆಎಂಎಫ್, ಪಶುಸಂಗೋಪನೆ ಇಲಾಖೆ, ಗುನಿಯಾಗ್ರಹಾರ, ಮೇಡಿಯಾಗ್ರಹಾರ, ರಾಜ್ಯ ಮೀನುಗಾರಿಕೆ ಕ್ಷೇತ್ರ, ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಬ್ಯಾಲಕೆರೆ, ಆಚಾರ್ಯ ಕಾಲೇಜು ಮುಖ್ಯ ರಸ್ತೆ, ಸೋಲದೇವನಹಳ್ಳಿ, ಗಾಣಿಗರಹಳ್ಳಿ, ಸೋಮಶೆಟ್ಟಿಹಳ್ಳಿ, ದಾಸೇನಹಳ್ಳಿ, ಗುಡ್ಡದಹಳ್ಳಿ, ಹೊಸಹಳ್ಳಿ ಪಾಳ್ಯ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ಪೂರ್ವ ವಲಯದ ಶೋಭಾ ಕ್ರಿಸಾಂಥಿಮಮ್, ಎಲ್‌ಆರ್‌ಪಿ ಕಚೇರಿ, ಜಯಕುಮಾರ್ ಆರ್‌ಎಂಯು, ದಿವ್ಯ ಶಾಂತಿ, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಟೈಟಾನ್ ಗ್ಯಾರೇಜ್, ಗಾಂಧಿನಗರ, ಭೈರವಿ ಅಪಾರ್ಟ್‌ಮೆಂಟ್ಸ್, ಹೆಗ್ಡೆ ನಗರ, ಚಂದ್ರಿಕಾ ಸೋಪ್ ಫ್ಯಾಕ್ಟರಿ, ಬಿಎಂಟಿಸಿ ಡಿಪೋ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಕೇಂದ್ರ ವಲಯದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಹೇಸ್ ರಸ್ತೆ, ಕಾನ್ವೆಂಟ್ ರಸ್ತೆ, ರೆಸಿಡೆನ್ಸಿ ರಸ್ತೆ, ಕ್ರೆಸೆಂಟ್ ರಸ್ತೆ, ಸಾಯಿಬಾಬಾ ದೇವಸ್ಥಾನ ರಸ್ತೆ, ಜೀವನ್‌ಕೇಂದ್ರ ಲೇಔಟ್, ಕೇಂಬ್ರಿಡ್ಜ್ ಲೇಔಟ್, ಗೌತಮಪುರ, ಆರ್ಟಿಲರಿ ರಸ್ತೆ, ಹೌದಿನ್ ರಸ್ತೆ, ಎಂವಿ ಗಾರ್ಡನ್, ನಾಲಾ ರಸ್ತೆ, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಜೋಗುಪಾಳ್ಯ ಮುಖ್ಯ ರಸ್ತೆ, ಗಂಗಾಧರ ಚೆಟ್ಟಿ ರಸ್ತೆ, ಅಗಾ ಅಬ್ಬಾಸ್ ಅಲಿ ರಸ್ತೆ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ದಕ್ಷಿಣ ವಲಯದ ಅಂಜನಾಪುರ, ಆವಲಹಳ್ಳಿ, ರಾಘವನಪಾಳ್ಯ, ನಾಗೇಗೌಡನ ಪಾಳ್ಯ, ಶೋಭಾ ಅಪಾರ್ಟ್‌ಮೆಂಟ್, ನಾರಾಯಣನಗರ 1 ಮತ್ತು 2ನೇ ಬ್ಲಾಕ್, ದೀಕ್ಷಾ ಕಾಲೇಜು, ಕೆಎಸ್‌ಐಟಿ ಕಾಲೇಜು, ಅಂಜನಾಪುರ 8ನೇ ಬ್ಲಾಕ್, ವೀವರ್ಸ್ ಕಾಲೇಜು, ಪುರಾವಂಕರ ಅಪಾರ್ಟ್‌ಮೆಂಟ್, ಅಮೃತನಗರ, ವಡ್ಡರಪಾಳ್ಯ, ಕೆಂಬತ್ತಹಳ್ಳಿ, ಶೋಭಾ ಫಾರೆಸ್ಟ್ ಅಪಾರ್ಟ್‌ಮೆಂಟ್, ತಲಘಟ್ಟಪುರದಲ್ಲೂ ವಿದ್ಯುತ್ ಕಡಿತ ಇರಲಿದೆ.
ಪಶ್ಚಿಮ ವಲಯದ ಮಲ್ಲೇಶ್ವರಂ, ವೈಯಾಲಿಕಾವಲ್, ಕೋದಂಡರಾಮಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಸುಬೇದಾರ್ ಪಾಳ್ಯ, ದಿವಾನರ ಪಾಳ್ಯ, ಮಾಡೆಲ್ ಕಾಲೋನಿ, ಶರೀಫ್ ನಗರ, ರಂಗನಾಥಪುರ, ಎಲ್.ಎನ್. ಕಾಲೋನಿ, ಲೊಟ್ಟೆಗೊಲ್ಲಹಳ್ಳಿ, ಆರ್.ಕೆ. ಗಾರ್ಡನ್, ಎಂಎಲ್‌ಎ ಲೇಔಟ್, ನೇತಾಜಿ ನಗರ, ಪೈಪ್‌ಲೈನ್ ರಸ್ತೆ, ಮತ್ತಿಕೆರೆ 1 ರಿಂದ 10 ನೇ ಮುಖ್ಯ ರಸ್ತೆ, ಮೋಹನ್ ಕುಮಾರ್ ನಗರ, ಜೆ.ಪಿ. ಪಾರ್ಕ್, ಅಕ್ಕಯ್ಯಪ್ಪ ಗಾರ್ಡನ್, ಬಿ.ಕೆ. ನಗರ, ಎಲ್‌ಐಸಿ ಕಾಲೋನಿ, ಪಂಪಾ ನಗರ, ಯಶವಂತಪುರ 1ನೇ ಮುಖ್ಯ ರಸ್ತೆ, ಎಚ್‌ಎಂಟಿ ಲೇಔಟ್, ಗೋಕುಲ 1ನೇ ಹಂತ, ಎಚ್‌ಎಂಟಿ ಮುಖ್ಯ ರಸ್ತೆ, ಎಸ್‌ಬಿಎಂ ಕಾಲೋನಿ, ಸಂಜೀವಪ್ಪ ಕಾಲೋನಿಯಲ್ಲೂ ಪವರ್ ಕಟ್ ಇರಲಿದೆ.
ಜೂನ್ 23 ರಂದು ಎಲ್ಲೆಲ್ಲಿ ಪವರ್ ಕಟ್?
ಕೋರಮಂಗಲ 3, 4, 5 ಮತ್ತು 6 ನೇ ಬ್ಲಾಕ್, ಕೋರಮಂಗಲ ಕೈಗಾರಿಕಾ ಪ್ರದೇಶ, ಮಡಿವಾಳ, ವೆಂಕಟೇಶ್ವರ ಲೇಔಟ್, ಚಿಕ್ಕಡುಗೋಡಿ, ಜೋಗಿ ಕಾಲೋನಿ, ಸೇಂಟ್ ಜಾನ್ಸ್ ಆಸ್ಪತ್ರೆ ಸಿಬ್ಬಂದಿ ಕ್ವಾರ್ಟರ್ಸ್, ಮಾರುತಿನಗರ ಆಡುಗೋಡಿ 7 ಮತ್ತು 8ನೇ ಬ್ಲಾಕ್, ಸಿಎಆರ್ ಪೊಲೀಸ್ ಕ್ವಾರ್ಟರ್ಸ್, ಆಡುಗೋಡಿ ಮುಖ್ಯ ರಸ್ತೆ, ಸೇಂಟ್ ಜಾನ್ಸ್ ಆಸ್ಪತ್ರೆ, 100 ಅಡಿ ರಿಂಗ್ ರಸ್ತೆ ಒರಾಕಲ್ ಕಂಪನಿ, ಬನ್ನೇರುಘಟ್ಟ ರಸ್ತೆ, ಕೆಎಚ್‌ಬಿ ಕಾಲೋನಿ, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಕೃಷ್ಣಾನಗರ ಇಂಡಸ್ಟ್ರಿಯಲ್ ಲೇಔಟ್, ಎಸ್.ಜಿ. ಪಾಳ್ಯ, ಮಡಿವಾಳ ಮಾರುಕಟ್ಟೆ, ಕೋರಮಂಗಲ ವಿಸ್ತರಣೆ ಮತ್ತು ಜಕ್ಕಸಂದ್ರ ಪ್ರದೇಶಗಳಲ್ಲಿ ಜೂನ್ 23 ರಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.


















