ಶ್ರೀನಗರ: ಶುಕ್ರವಾರ ಬೆಳಗ್ಗೆಯಿಂದ ಬಾಲ ಮುದುಡಿಕೊಂಡು ಸುಮ್ಮನಾಗಿದ್ದ ಪಾಕ್, ರಾತ್ರಿಯಾಗುತ್ತಿದ್ದಂತೆ ಮತ್ತೆ ತನ್ನ ಬಾಲ ಬಿಚ್ಚಿದೆ. ಜಮ್ಮು ಕಾಶ್ಮೀರ, ರಾಜಸ್ಥಾನ (rajasthan), ಪಂಜಾಬ್ ಗಡಿ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ಡ್ರೋನ್ ಗಳಿಂದ ದಾಳಿ ನಡೆಸಿದ್ದು, ಭಾರತೀಯ ಸೇನೆ ಕೂಡ ತಿರುಗೇಟು ನೀಡಿದೆ.
ಫಿರೋಜ್ ಪುರದಲ್ಲಿ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಖೈ ಫೆಮೆ ಕಿ ಗ್ರಾಮದ ಮನೆಯೊಂದರ ಮೇಲೆ ಶೆಲ್ ಬಿದ್ದಿದೆ. ಈ ವೇಳೆ ಭಾರೀ ಸ್ಫೋಟ ಸಂಭವಿಸಿದೆ. ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತೀಯ ಸೇನೆ ಪಾಕ್ನ ಡ್ರೋನ್ಗಳನ್ನು ಆಗಸದಲ್ಲೇ ಹೊಡೆದುರುಳಿಸಿದೆ. ಹೀಗಾಗಿ ಅನಾಹುತವಾಗಿಲ್ಲ. ಆಕಾಶದಲ್ಲಿ ಹೊಡೆದು ಹಾಕಿರುವ ಶಬ್ಧ ಭಯಾನಕವಾಗಿದ್ದು, ಜನರು ಬೆಚ್ಚಿ ಬೀಳುತ್ತಿದ್ದಾರೆ. ಆವಂತಿಪೋರಾದಲ್ಲೂ ಡ್ರೋನ್ ದಾಳಿಗೆ ಯತ್ನಿಸಿದೆ. ಅವಂತಿಪೋರಾದ ಏರ್ಬೇಸ್ ಗುರಿಯಾಗಿಸಿ ಹಾರಿಸಿದ್ದ ಡ್ರೋನ್ ಅನ್ನು ಧ್ವಂಸ ಮಾಡಲಾಗಿದೆ.
ಜಮ್ಮುವಿನಲ್ಲಿ ಮಿಸೈಲ್ ಅಟ್ಯಾಕ್ಗೆ ಪಾಕಿಸ್ತಾನ ಯತ್ನಿಸಿದ್ದು, ಭಾರತ ಏರ್ ಡಿಫೈನ್ ಸಿಸ್ಟಮ್ ಪಾಕ್ ಮಿಸೈಲ್ ನ್ನು ಹೊಡೆದುರುಳಿಸಿದೆ. ರಾಜಸ್ಥಾನದ ಜೈಸಲ್ಮೇರ್, ಜಮ್ಮುವಿನ ಪಠಾಣ್ ಕೋಟ್, ಪಂಜಾಬ್ನ ಫಿರೋಜ್ ಪುರ್ನಲ್ಲೂ ಬ್ಲಾಕ್ ಔಟ್ ಘೋಷಿಸಲಾಗಿದೆ.