ಹುಬ್ಬಳ್ಳಿ : ಹಳೆ ದ್ವೇಷದ ಹಿನ್ನೆಲೆ ಆಟೋ ಚಾಲಕನಿಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ ಬಳಿ ತಡರಾತ್ರಿ ನಡೆದಿದೆ.
ಆಟೋ ಚಾಲಕ ಸೋಮಶೇಖರ್ ಎಂಬಾತನಿಗೆ ರೋಹಿತ್ ಎಂಬ ಯುವಕ ಚಾಕು ಇರಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ, ಗಾಯಗೊಂಡ ಆಟೋ ಚಾಲಕನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















