ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ತನ್ನ ಮೊದಲ ಪೋಸ್ಟರ್‌ನಿಂದಲೇ ಹೊಸ ವಿವಾದಕ್ಕಿಡಾಗಿದ್ದ ‘ಕರಳೆ’ ಸಿನಿಮಾದ ಹೊಸ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಆಗಿದೆ. ‘ಬ್ಯಾಕ್ ಬೆಂಚರ್ಸ್’ ಚಿತ್ರದಲ್ಲಿ ಗ್ಲಾಮರ್ ಡಾಲ್ ಆಗಿ ಮಿಂಚಿದ್ದ ಕುಂಕುಮ್ ಹರಿಹರ ಇಲ್ಲಿ ಸಖತ್ ಡಿ-ಗ್ಲಾಮ್ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ದೇವಕಿ ಎಂಬ ಪಾತ್ರ ತುಂಬಾ ಡೆಡ್ಲಿಯಾಗಿದೆ. ಒಂದು ರಿಯಲ್ ಘಟನೆಯ ಜಾಡು ಹಿಡಿದಿರೋ ನಿರ್ದೇಶಕ ಅವಿರಾಮ್ ಕಂಠಿರವ ಇದುವರೆಗೂ ಎಲ್ಲೂ ಕಥೆಯ ಸೀಕ್ರೆಟ್ ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.

ಕರಳೆ ಚಿತ್ರ ಕನ್ನಡ ಮತ್ತು ಚೈನೀಸ್ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗೋ ಸಿದ್ಧತೆ ನಡೆಸಿಕೊಳ್ತಿದೆ. ಯಾರು ಊಹಿಸಲಾಗದ ಒಂದು ಡಾರ್ಕ್ ಶೇಡ್ ಮೇಕಿಂಗ್ ಚಿತ್ರದಲ್ಲಿರುತ್ತೆ ಎಂದು ಪ್ರಾಮಿಸ್ ಮಾಡೋ ನಿರ್ದೇಶಕ ಅವಿರಾಮ್ ಕಂಠಿರವ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ತಮಿಳು ಹಾಗೂ ಮಳೆಯಾಳಂನಲ್ಲಿ ಇಂತಹ ಕ್ರಿಯೆಟಿವ್ ಕಂಟೆಂಟ್‌ಗಳಿಗೆ ಸ್ಕೊಪ್ ಜಾಸ್ತಿ, ಕನ್ನಡದಲ್ಲೂ ಆ ಕಲ್ಚರ್‌ಗೆ ಪುಷ್ಠಿ ಸಿಗ್ಬೇಕು ಎಂಬ ಅಭಿಪ್ರಾಯವೂ ಕೇಳಿಬರ್ತಿದೆ. ಪೋಸ್ಟರ್ ಹಂತದಲ್ಲೇ ತಲೆಗೆ ಹುಳ ಬಿಟ್ಟಿರೋ ‘ಕರಳೆ’, ಬಿಡುಗಡೆಯ ಸಮಯಕ್ಕೆ ಇನ್ಯಾವ ಹೊಸ ಗೂಗ್ಲಿ ಹಾಕುತ್ತೋ ಗೊತ್ತಿಲ್ಲ..
ವರದಿ :
ಮಾವಳ್ಳಿ ಕಾರ್ತಿಕ್, ಫಿಲಂ ಡೆಸ್ಕ್.. ಕರ್ನಾಟಕ ನ್ಯೂಸ್ ಬೀಟ್
ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಗೆ ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡೆನ್ಸ್
.



















