ನವದೆಹಲಿ: ಭಾರತದಲ್ಲಿ ಇಂದು ಅರ್ಧ ಚಂದ್ರ ದರ್ಶನವಾಗಿದ್ದು, ಮಾರ್ಚ್ 31ರಂದು ಭಾರತದಲ್ಲಿ ಈದ್-ಉಲ್-ಫಿತರ್ ಆಚರಿಸಲಾಗುತ್ತಿದೆ.
ರಂಜಾನ್ ಉಪವಾಸ ಮಾಸದ ಮುಕ್ತಾಯವನ್ನು ಸೂಚಿಸುವ ಈದ್-ಉಲ್-ಫಿತರ್ (Eid-Ul-Fitr) ನ್ನು ಇಂದು ಸಂಜೆ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಸೋಮವಾರ ಆಚರಿಸಲಾಗುತ್ತಿದೆ. ಭಾರತದಲ್ಲಿ, ಪವಿತ್ರ ರಂಜಾನ್ ತಿಂಗಳು ಮಾರ್ಚ್ 2 ರಂದು ಪ್ರಾರಂಭವಾಗಿದ್ದು, ಈ ತಿಂಗಳು ಮುಸ್ಲಿಮರು ಉಪವಾಸ ವ್ರತ ಮಾಡುತ್ತಾರೆ. ನಾಳೆ ಆ ವ್ರತ ಅಂತ್ಯವಾಗುತ್ತಿದೆ.