ಶಿವಮೊಗ್ಗ: ಬಂದೂಕು ಮಿಸ್ ಫೈರಿಂಗ್ ಆಗಿ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೀರ್ಥಹಳ್ಳಿಯ (Thirthahalli) ಕಟ್ಟೆಹಕ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಳಾವರ ಗ್ರಾಮದ ಗೌತಮ್ (25) ಸಾವನ್ನಪ್ಪಿರುವ ದುರ್ದೈವಿ ಎನ್ನಲಾಗಿದೆ. ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ ಪ್ರಾಣಿಯೊಂದನ್ನು ಹೊಡೆಯಲು ಹೋಗಿ ಮಿಸ್ ಫೈರ್ ಆಗಿ, ಯುವಕ ಸಾವನ್ನಪ್ಪುವಂತಾಗಿದೆ.
ಯುವಕರ ಗುಂಪು ಕಟ್ಟೆಹಕ್ಲುಗೆ ಬೇಟೆಗಾಗಿ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.