ಮೈಸೂರು: ನಗರದಲ್ಲಿ ಎಲ್‌ಪಿಜಿ ಗ್ಯಾಸ್ ಅಭಾವ ತೀವ್ರಗೊಂಡಿದ್ದು, ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾಸ್ ಸಿಗದೆ ಚಾಲಕರು ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಧನ್ವಂತರಿ ರಸ್ತೆಯಲ್ಲಿ ಇರುವ ಗ್ಯಾಸ್ ಬಂಕ್ ಬಳಿ ಆಟೋಗಳು ಸಾಲುಗಟ್ಟಿ ನಿಂತಿದ್ದು, ಗ್ಯಾಸ್ ಪಡೆಯಲು ಚಾಲಕರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿನ ಎರಡು ಎಲ್‌ಪಿಜಿ ಗ್ಯಾಸ್ ಬಂಕ್‌ಗಳಲ್ಲಿ ಸ್ಟಾಕ್ ಇಲ್ಲದ ಕಾರಣ ಅವುಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಳಿದಿರುವ ಬಂಕ್‌ಗಳತ್ತ ಆಟೋ ಚಾಲಕರು ಮುಗಿಬಿದ್ದಿದ್ದಾರೆ. ಗ್ಯಾಸ್ ಕೊರತೆಯಿಂದ ದೈನಂದಿನ ಜೀವನೋಪಾಯ ನಡೆಸುವುದು ಕಷ್ಟವಾಗಿದ್ದು, ಆಟೋ ಚಾಲಕರು ತೀವ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮೈಸೂರಿನಲ್ಲಿ ಗ್ಯಾಸ್ ಸಮಸ್ಯೆ ಮುಂದುವರಿದಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ ಸ್ವಯಂ ಜನಗಣತಿಗೆ ನಾಗರೀಕರಿಂದ ನೀರಸ ಸ್ಪಂದನೆ!


















