ಬೆಂಗಳೂರು : ಭಾರತೀಯ ಜೀವ ವಿಮಾ ನಿಗಮವು (LIC) ದೇಶದ ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆಯಾಗಿದೆ. ಕೋಟ್ಯಂತರ ಜನ ಇದರ ಪಾಲಿಸಿದಾರರಾಗಿದ್ದಾರೆ. ಇದರ ಮಧ್ಯೆಯೇ, ಎಲ್ಐಸಿಯು ಪಾಲಿಸಿದಾರರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಗ್ರಾಹಕರು ಇನ್ನುಮುಂದೆ ಎಲ್‌ಐಸಿ ಪಾಲಿಸಿಗಳ ಪ್ರೀಮಿಯಂ ಅನ್ನು ಕ್ರೆಡಿಟ್ ಕಾರ್ಡ್ (Credit Card) ಮೂಲಕ ಪಾವತಿಸುವುದನ್ನು ಎಲ್ಐಸಿ ನಿಷೇಧಿಸಿದೆ. ಹೆಚ್ಚುತ್ತಿರುವ ಕನ್ವೀನಿಯನ್ಸ್ ಶುಲ್ಕಗಳನ್ನು (Convenience Charges) ತಪ್ಪಿಸುವ ಉದ್ದೇಶದಿಂದ ಎಲ್‌ಐಸಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳ ಮೇಲಿನ ಕನ್ವೀನಿಯನ್ಸ್ ಮತ್ತು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕಗಳು ಗಣನೀಯವಾಗಿ ಹೆಚ್ಚುತ್ತಿವೆ. ಕ್ರೆಡಿಟ್ ಕಾರ್ಡ್ ಮೂಲಕ ದೊಡ್ಡ ಮೊತ್ತದ ಪ್ರೀಮಿಯಂ ಪಾವತಿಸುವಾಗ ಗ್ರಾಹಕರು ಅಥವಾ ಸಂಸ್ಥೆಯು ಹೆಚ್ಚಿನ ಮೊತ್ತವನ್ನು ಶುಲ್ಕದ ರೂಪದಲ್ಲಿ ಭರಿಸಬೇಕಾಗುತ್ತಿತ್ತು. ಈ ಹೆಚ್ಚುವರಿ ಹೊರೆಯನ್ನು ತಪ್ಪಿಸಲು ಮತ್ತು ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಲು ಎಲ್‌ಐಸಿ ತನ್ನ ಪಾವತಿ ಪಟ್ಟಿಯಿಂದ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನೇ ತೆಗೆದುಹಾಕಿದೆ ಎಂದು ವರದಿಯಾಗಿದೆ.
ಗ್ರಾಹಕರಿಗಿರುವ ಇತರ ಆಯ್ಕೆಗಳು ಯಾವುವು?
ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ತೆಗೆದುಹಾಕಲಾಗಿದ್ದರೂ, ಗ್ರಾಹಕರು ಡಿಜಿಟಲ್ ರೂಪದಲ್ಲಿ ಪ್ರೀಮಿಯಂ ಪಾವತಿಸಲು ಇತರ ಹಲವು ಸುರಕ್ಷಿತ ಮತ್ತು ಸುಲಭ ಆಯ್ಕೆಗಳು ಲಭ್ಯ ಇವೆ. ಯುಪಿಐ ಅಂದರೆ, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮುಂತಾದ ಯುಪಿಐ ಆ್ಯಪ್ ಗಳ ಮೂಲಕ ಉಚಿತವಾಗಿ ಪಾವತಿಸಬಹುದು. ಹಾಗೆಯೇ, ಗ್ರಾಹಕರು ನೆಟ್ ಬ್ಯಾಂಕಿಂಗ್ ಹಾಗೂ ಡೆಬಿಟ್ ಕಾರ್ಡ್ ಗಳ ಮೂಲಕವೂ ಪ್ರೀಮಿಯಂ ಪಾವತಿಸಬಹುದು.
ಹಾಗೆಯೇ. ಪ್ರತಿ ತಿಂಗಳು ಅಥವಾ ನಿಗದಿತ ಅವಧಿಗೆ ನಿಮ್ಮ ಬ್ಯಾಂಕ್ ಖಾತೆಯಿಂದಲೇ ಸ್ವಯಂಚಾಲಿತವಾಗಿ ಕಡಿತವಾಗುವಂತೆ ಸೆಟ್ ಮಾಡಬಹುದು. ಸಾಮಾನ್ಯವಾಗಿ ಅನೇಕ ಗ್ರಾಹಕರು ಬಜೆಟ್ ನಿರ್ವಹಣೆಗಾಗಿ ಅಥವಾ ರಿವಾರ್ಡ್ ಪಾಯಿಂಟ್ ಗಳ ಆಸೆಗೆ ಕ್ರೆಡಿಟ್ ಕಾರ್ಡ್ ಮೂಲಕ ಎಲ್‌ಐಸಿ ಪ್ರೀಮಿಯಂ ಪಾವತಿಸುತ್ತಿದ್ದರು. ಅಂತಹ ಗ್ರಾಹಕರಿಗೆ ಈ ನಿರ್ಧಾರದಿಂದ ತುಸು ನಿರಾಶೆಯಾಗಬಹುದು. ಆದರೆ, ಹೆಚ್ಚುವರಿ ಕನ್ವೀನಿಯನ್ಸ್ ಶುಲ್ಕ ಉಳಿತಾಯವಾಗುತ್ತದೆ.
ಇದನ್ನೂ ಓದಿ : ಕರ್ನಾಟಕ ಲೋಕಾಯುಕ್ತದಲ್ಲಿ 25 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಪಿಯುಸಿ ಪಾಸಾಗಿದ್ದರೆ ಸಾಕು



















