ಮಂಗಳೂರು: ಭೂಗತ ಪಾತಕಿಯಿಂದ ಉಧ್ಯಮಿಗೆ ಬೆದರಿಕೆಯ ಕರೆ ಬಂದಿರುವ ಘಟನೆ ನಡೆದಿದೆ.
ಇಲ್ಲಿನ ಬಜ್ಪೆಯ ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ (threat call) ಬಂದಿದ್ದು, 3 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ.
ಉದ್ಯಮಿ ರೊನಾಲ್ಡ್ ಎಂಬುವವರಿಗೆ ಭೂಗತ ಪಾತಕಿ ಕಲಿ ಯೋಗೇಶ್ ಹೆಸರಿನಲ್ಲಿ ಬೆದರಿಕೆಯ ಕರೆ ಬಂದಿದೆ. ಈ ಕರೆ ಜ. 17ರಂದು ಬಂದಿದ್ದು, 3 ಕೋಟಿ ರೂ. ನೀಡದಿದ್ದರೆ ಮನೆಯವರನ್ನೆಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಕುರಿತು ಉದ್ಯಮಿ ರೊನಾಲ್ಡ್ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರೊನಾಲ್ಡ್ ಕೆಂಪು ಕಲ್ಲಿನ ಕೋರೆ ಸೇರಿದಂತೆ ಇನ್ನಿತರ ಉದ್ಯೋಗ ನಡೆಸುತ್ತಿದ್ದಾರೆ. ಕಲಿ ಯೋಗಿಶ್ ಹೆಸರಿನಲ್ಲಿ ಪಾತಕಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.