ದುಬೈ : ದುಬೈಯಲ್ಲಿ ನಡೆಯುತ್ತಿರುವ ಏರ್ ಶೋನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನವಾಗಿದೆ. ಎಚ್‌ಎಎಲ್ ನಿರ್ಮಿತ ಈ ಲಘು ಯುದ್ಧ ವಿಮಾನ ಏಕಾಏಕಿ ಭೂಮಿಗೆ ಅಪ್ಪಳಿಸಿದೆ.
ದುರ್ಘಟನೆಯಲಗಲಿ ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನವೆಂಬರ್ 21ರ ಮಧ್ಯಾಹ್ನ 2:15ರ ವೇಳೆಗೆ ಈ ಘಟನೆ ನಡೆದಿದೆ. ಏರ್ ಶೋ ನಡೆಯುತ್ತಿರುವ ಎಔ ಮಾಕ್ಟಮ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಸಮೀಪ ತೇಜಸ್ ಪತನವಾತ್ತಿದ್ದಂತೆ ದಟ್ಟ ಹೊಗೆ ವ್ಯಾಪಿಸಿದ್ದು, ವಿಡಿಯೋ ವೈರಲ್ ಆಗಿದೆ.
ವಿಶ್ವದ ಅತಿದೊಡ್ಡ ಏರ್ ಶೋಗಳಲ್ಲಿ ಒಂದಾದ, 2 ವರ್ಷಕ್ಕೊಮ್ಮೆ ನಡೆಯುವ ದುಬೈ ಏರ್ ಶೋ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಏರ್ ಶೋ 5 ದಿನಗಳಿಂದ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇದನ್ನೂ ಓದಿ : ಇಸ್ಲಾಮಾಬಾದ್ | ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ.. 15 ಕಾರ್ಮಿಕರು ಸಾವು, 7 ಮಂದಿಗೆ ಗಾಯ


















