ಮೆಲ್ಬೋರ್ನ್ | ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆದಿದ್ದು, ಮಳೆಯಿಂದಾಗಿ ರದ್ದಾಯಿತು. ಈ ಪಂದ್ಯದಲ್ಲಿ, ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ, ಭಾರತೀಯ ಇನ್ನಿಂಗ್ಸ್‌ನ 9.4 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು, ಈ ಸಂದರ್ಭ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ಇದೀಗ ಉಭಯ ತಂಡಗಳ ನಡುವಿನ ಎರಡನೇ ಟಿ20 ಪಂದ್ಯವು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆಯಲಿದೆ. ಏಕದಿನ ಸರಣಿ ಕಳೆದುಕೊಂಡಿರುವ ಟೀಮ್ ಇಂಡಿಯಾ ಟಿ20 ಸರಣಿ ಮೇಲೆ ಕಣ್ಣಿಟ್ಟಿದ್ದು, ಇಂದಿನ ಪಂದ್ಯ ಗೆಲ್ಲುವ ಇರಾದೆಯಲ್ಲಿದೆ.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 1:45 ಕ್ಕೆ ಪ್ರಾರಂಭವಾಗುತ್ತದೆ. ಟಾಸ್ ಅರ್ಧ ಗಂಟೆ ಮುಂಚಿತವಾಗಿ, ಮಧ್ಯಾಹ್ನ 1:15 ಕ್ಕೆ ನಡೆಯಲಿದೆ. ಮೊದಲ ಪಂದ್ಯ ರದ್ದಾದ ಕಾರಣ ಸದ್ಯ ನಾಲ್ಕು ಪಂದ್ಯಗಳು ಮಾತ್ರ ಉಳಿದಿವೆ. ಇಂದಿನ ಪಂದ್ಯವನ್ನು ಯಾವ ತಂಡ ಗೆದ್ದರೂ ಸರಣಿ ಗೆಲ್ಲುವ ಸಾಧ್ಯತೆ ಗಮನಾರ್ಹವಾಗಿ ಹೆಚ್ಚಿರುತ್ತದೆ. ಆದ್ದರಿಂದ, ಎರಡೂ ತಂಡಗಳು ಇಂದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಗುರಿ ಹೊಂದಿದೆ.
ಇದನ್ನೂ ಓದಿ : ಭಾರತದ ವೈಟ್-ಬಾಲ್ ಕ್ರಿಕೆಟ್ ಮನಸ್ಥಿತಿಯನ್ನು ಬದಲಿಸಿದ ಕೀರ್ತಿ ರೋಹಿತ್ ಶರ್ಮಾಗೆ ಸಲ್ಲಬೇಕು: ರಾಹುಲ್ ದ್ರಾವಿಡ್



















