ಬೆಂಗಳೂರು: ನೀವು ಕರ್ನಾಟಕ ಸರ್ಕಾರದ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿದ್ದರೆ, ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ (KFCSC Recruitment 2026) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಕ್ವಾಲಿಟಿ ಇನ್ಸ್ ಪೆಕ್ಟರ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ನೇಮಕಾತಿ ಸಂಸ್ಥೆ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (KFCSC)
ಹುದ್ದೆಗಳ ಹೆಸರು: ಕ್ವಾಲಿಟಿ ಇನ್ಸ್ ಪೆಕ್ಟರ್ ಇತ್ಯಾದಿ
ಹುದ್ದೆಗಳ ಸಂಖ್ಯೆ: ವಿವಿಧ
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್
ಕ್ವಾಲಿಟಿ ಇನ್ಸ್ ಪೆಕ್ಟರ್, ಅಸಿಸ್ಟಂಟ್ ಮ್ಯಾನೇಜರ್ ಹಾಗೂ ಸೀನಿಯರ್ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿ ಹೊಂದಿದವರಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಸಂಬಳ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಬಿಇ, ಬಿ ಟೆಕ್, ಎಂಇ, ಎಂ ಟೆಕ್ ಕೋರ್ಸ್ ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 35 ವರ್ಷಗಳ ವಯೋಮಿತಿ ಇದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ kfcsc.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಆನ್ ಲೈನ್ ಮೂಲಕವೇ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅಪ್ ಲೋಡ್ ಮಾಡಬೇಕು. ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನೇಮಕಾತಿ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿರುವ K-RIDE ಸಂಸ್ಥೆಯಲ್ಲಿ 9 ಮ್ಯಾನೇಜರ್ ಹುದ್ದೆಯ ನೇಮಕಾತಿ | 2.6 ಲಕ್ಷ ರೂಪಾಯಿ ಸ್ಯಾಲರಿ



















