ಶಿರಸಿ : ವಿಧಾನ ಪರಿಷತ್ತಿನಲ್ಲಿ ಈ ಹಿಂದೆ ಪಕ್ಷಗಳ ಬಲಾಬಲ ಬದಲಾದರೂ ಸಭಾಪತಿಗೆ ಬದಲಿಸಿರಲಿಲ್ಲ. ಈಗ ಕಾಂಗ್ರೆಸ್ ಗೆ ಬಹುಮತ ಬಂದರೂ ನನಗೆ ಆತಂಕವಿಲ್ಲ. ನನ್ನನ್ನು ಸಭಾಪತಿ ಸ್ಥಾನದಿಂದ ಇಳಿಸಲು ಪ್ರಯತ್ನಿಸಿದರೇ, ತಕ್ಷಣವೇ ರಾಜೀನಾಮೆ ನೀಡುವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
‘ಒಂದು ವರ್ಷ ಅಥವಾ ಹತ್ತು ವರ್ಷ ಸಭಾಪತಿಯಾದರೂ ಅಧಿಕಾರದ ಬಳಿಕ, ಮಾಜಿ ಎನ್ನುತ್ತಾರೆ. ಈ ಹಿಂದೆ ವಿ.ಎಸ್.ಉಗ್ರಪ್ಪ ಮತ್ತು ಡಿ.ಎಚ್.ಶಂಕರಮೂರ್ತಿ ಅವರನ್ನು ಪಕ್ಷ ಬಲಾಬಲ ಬದಲಾದಾಗ ಅಧಿಕಾರದಿಂದ ಇಳಿಸಲಾಗಿತ್ತು. ಈಗ ಕಾಂಗ್ರೆಸ್ ಅಂಥ ಕೆಲಸ ಮಾಡಿದಲ್ಲಿ, ಇತಿಹಾಸ ನಿರ್ಮಿಸಿದಂತಾಗುತ್ತದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಇಂದು ಪರಿಷತ್‌ನಲ್ಲಿ ಅಲ್ಲದೇ, ಎಲ್ಲಿಯೂ ಮೌಲ್ಯ ಉಳಿದಿಲ್ಲ. ಎಲ್ಲವೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೇ ಮುಗಿದಿದೆ. ಈಗ ಹಣದ ಮತ ಹಾಕುವುದು, ಪಡೆಯುವುದು ನಡೆದಿದೆ’ ಎಂದಿದ್ದಾರೆ.


















