ಬೆಂಗಳೂರು : ಬೆಂಗಳೂರಲ್ಲಿ ಜನಗಣತಿ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದ್ದು, ಗ್ರೇಟರ್ ಬೆಂಗಳೂರು ಆಡಳಿತ (GBA) ವ್ಯಾಪ್ತಿಯ ಪಂಚ ಪಾಲಿಕೆಗಳಲ್ಲಿ ಮನೆ ಮನೆ ಸಮೀಕ್ಷೆ ಆರಂಭವಾಗಿದೆ. ಜನಗಣತಿ-2027ಕ್ಕೆ ಸಿದ್ಧತೆ ಮಾಡಿಕೊಂಡಿರುವ ಜಿಬಿಎ, ಒಟ್ಟು 26,616 ಸಿಬ್ಬಂದಿಯನ್ನು ನಿಯೋಜಿಸಿದೆ. ಇದರಲ್ಲಿ 23,705 ಗಣತಿದಾರರು ಮತ್ತು 2,912 ಮೇಲ್ವಿಚಾರಕರು ಸೇರಿದ್ದಾರೆ.

ಜನಗಣತಿ ಕಾಯ್ದೆ 1948ರ ಅನ್ವಯ, ನಾಗರಿಕರು ಅಗತ್ಯ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದೆ. ಮಾಹಿತಿ ನೀಡಲು ನಿರಾಕರಿಸಿದರೆ ಅಥವಾ ಗಣತಿ ಸಿಬ್ಬಂದಿಗೆ ಅಸಹಕಾರ ತೋರಿದರೆ, ಸಂಬಂಧಿತ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
5 ನಗರ ಪಾಲಿಕೆಗಳಲ್ಲಿ ಸಿಬ್ಬಂದಿ ನಿಯೋಜನೆ ವಿವರ
- ಬೆಂಗಳೂರು ಉತ್ತರ ನಗರ ಪಾಲಿಕೆ 4996
- ಬೆಂಗಳೂರು ಪಶ್ಚಿಮ ನಗರ ಪಾಲಿಕೆ 7447
- ಬೆಂಗಳೂರು ಪೂರ್ವ ನಗರ ಪಾಲಿಕೆ 3584
- ಬೆಂಗಳೂರು ಕೇಂದ್ರ ನಗರ ಪಾಲಿಕೆ 4586
- ಬೆಂಗಳೂರು ದಕ್ಷಿಣ ನಗರ ಪಾಲಿಕೆ 5734
ಇದನ್ನೂ ಓದಿ : ತಿಂಗಳಿಗೊಂದು ‘ಋತುಸ್ರಾವ ರಜೆ’ ಕಡ್ಡಾಯ.. ಹೈಕೋರ್ಟ್ ಮಹತ್ವದ ಆದೇಶ


















