ಸ್ತ್ರೀ 2 ಬಂಪರ್ ಯಶಸ್ಸು ನಟಿ ಶ್ರದ್ಧಾ ಕಪೂರ್ ರ ಅದೃಷ್ಟವನ್ನು ಬದಲಿಸಿದೆ. ಸ್ತ್ರೀ ಸಿನಿಮಾದ ಯಸಸ್ಸಿನ ಅಲೆಯಲ್ಲಿ ತೇಲುತ್ತಿರುವ ಶ್ರದ್ಧಾ ಇದೀಗ ದಾಖಲೆ ಮೊತ್ತದ ಸಂಭಾವನೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಏಕ್ತಾ ಕಪೂರ್ ನಿರ್ಮಾಣದ ಹೊಸ ಸಿನಿಮಾದಲ್ಲಿ ನಟಿಸಲು ಓಕೆ ಎಂದಿರುವ ಶ್ರದ್ಧಾ ಈ ಚಿತ್ರಕ್ಕೆ ಬಾಲಿವುಡ್ ನ ಅತಿ ಹೆಚ್ಚು ಸಂಭಾವನೆ ಪಡೆಯುವ ದೀಪಿಕಾ ಮತ್ತು ಕಿಯಾರ ಅಡ್ವಾಣಿಯನ್ನು ಹಿಂದಿಕ್ಕಿ ಮುನ್ನುಗ್ಗಿದ್ದಾರೆ. ತುಂಬಾಡ್ ಖ್ಯಾತಿಯ ರಾಹಿ ಅನಿಲ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಶ್ರದ್ಧಾ ನಾಯಕಿಯಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರು ದಾಖಲೆಯ 17 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲಾ ಬಾಲಿವುಡ್ ನ ಸ್ಟಾರ್ ನಟರ ಮಾದರಿಯಲ್ಲೇ ಹೊಸ ಸಿನಿಮಾದ ಚಿತ್ರಮಂದಿರ ಬಿಡುಗಡೆ ಕಲೆಕ್ಷನ್ ನಲ್ಲೂ ಪಾಲು ಗಿಟ್ಟಿಸುತ್ತಿದ್ದಾರೆ. ಅಲ್ಲಿಗೆ ಬಾಲಿವುಡ್ ನ ಓರ್ವ ನಟಿ ಈ ಮಟ್ಟದ ಸಂಭಾವನೆ ಮತ್ತು ಶೇರ್ ಪಡೆದ ಐತಿಹ್ಯ ಸೃಷ್ಟಿಸಿದ ಕೀರ್ತಿ ಶ್ರದ್ಧಾ ಪಾಲಾಗುತ್ತಿದೆ.