ಬಾಲಿವುಡ್ ನ ಪಿಂಕಿ, ಪ್ರಿಯಾಂಕಾ ಚೋಪ್ರಾ (Priyanka Chopra) ದೇಶಕ್ಕೆ ಮತ್ತೆ ಬಂದಿದ್ದಾರೆ. ಈ ವೇಳೆ ಅವರು ಹೊಕ್ಕಳಿಗೆ ಹಾಕಿರುವ ಡೈಮಂಡ್ ರಿಂಗ್ ಭಾರೀ ಸದ್ದು ಮಾಡುತ್ತಿದೆ.
ಮಹೇಶ್ ಬಾಬು ನಟನೆಯ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಆಗಮಿಸಿದ್ದಾರೆ. ಈ ವೇಳೆ ಹೊಕ್ಕಳಿಗೆ ಧರಿಸಿದ್ದ ಡೈಮಂಡ್ ರಿಂಗ್ ಬಗ್ಗೆ ಚರ್ಚೆ ಶುರುವಾಗಿದ್ದು, ಈಗ ಅದರ ಬೆಲೆ ವೈರಲ್ ಆಗಿದೆ. ಪಿಂಕಿ ಧಿರಿಸಿದ್ದ ಡೈಮಂಡ್ ರಿಂಗ್ ಬೆಲೆ ಬರೋಬ್ಬರಿ 2.7 ಕೋಟಿ ರೂ. ಅಂತೆ. ಈ ದರ ಕೇಳಿ ಅಭಿಮಾನಿಗಳು ಗಾಬರಿ ವ್ಯಕ್ತಪಡಿಸುತ್ತಿದ್ದಾರೆ.
ಮುಂಬೈ ಏರ್‌ಪೋರ್ಟ್‌ನಿಂದ ಹೊರಬರುವಾಗ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಕೋ-ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟೈಲೀಶ್ ಲುಕ್ ಫ್ಯಾನ್ಸ್ ಗಮನ ಸೆಳೆದಿದೆ. ಪ್ರಿಯಾಂಕಾ ಹೊಕ್ಕಳಿಗೆ ಧರಿಸಿದ ಬೆಲ್ಲಿ ಬಟನ್ ಡೈಮಂಡ್ ಪಿನ್ ಇದರ ಬೆಲೆ ಕೇಳಿ ಗಾಬರಿಯಾಗಿದ್ದಾರೆ.
ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಲೀಡ್ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ದೇಶದ ಹಲವು ನಗರಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಈಗಾಗಲೇ ಪಿಂಕಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.