ಇತ್ತೀಚಿನ ದಿನಗಳಲ್ಲಿ ಯುವಕರಿಂದ ಹಿಡಿದು ಹಿರಿಯರ ತನಕ ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಹಿಂದೆ 50 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುವ ಹೃದಯ ಸಮಸ್ಯೆಗಳು ಈಗ 25–30 ವರ್ಷದವರಲ್ಲಿಯೂ ಸಾಮಾನ್ಯವಾಗಿ ಕಂಡುಬರುತ್ತಿದೆ. ಈ ಸ್ಥಿತಿ ನಮ್ಮ ಜೀವನಶೈಲಿಯ ಬದಲಾವಣೆ, ಒತ್ತಡ ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದ ಕಾರಣವಾಗಿದೆ.
ಹೃದಯದ ಆರೋಗ್ಯ ಚೆನ್ನಾಗಿ ಇರಬೇಕೆಂದರೆ, ಆರೋಗ್ಯ ಜೀವನಶೈಲಿ ಹಾಗೂ ಆರೋಗ್ಯಕಾರಿ ಆಹಾರ ಪದ್ಧತಿ ಅತ್ಯಗತ್ಯ. ಇದರ ಜೊತೆಗೆ ಪ್ರತಿನಿತ್ಯ ವ್ಯಾಯಾಮ, ಒತ್ತಡಮುಕ್ತ ಜೀವನಶೈಲಿ. ಸರಿಯಾದ ದೇಹ ತೂಕ ಕಾಪಾಡುವುದು, ಬೊಜ್ಜು ಹೆಚ್ಚಾಗದಂತೆ ನೋಡಿಕೊಳ್ಳುವುದು, ಧೂಮಪಾನ ಹಾಗೂ ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರ ಇರುವುದರ ಜೊತೆಗೆ, ಬಾಯಿಗೆ ರುಚಿ ನೀಡುವ ಕೆಲವೊಂದು ಆಹಾರಗಳಿಂದ ದೂರವಿದ್ದರೆ, ಮಾತ್ರ ಹೃದಯವನ್ನು ಜೋಪಾನವಾಗಿಡುವಲ್ಲಿ ಸಹಕಾರಿಯಾಗಲಿದೆ.

ಹೃದಯ ಕಾಯಿಲೆ ಹೆಚ್ಚಾಗಲು ಪ್ರಮುಖ ಕಾರಣ
- ದಿನನಿತ್ಯ ವ್ಯಾಯಾಮದ ಕೊರತೆ, ದೀರ್ಘಕಾಲ ಕುಳಿತು ಕೆಲಸ ಮಾಡುವುದು, ಮತ್ತು ಶಾರೀರಿಕ ಚಟುವಟಿಕೆಯ ಅಭಾವ
- ಫಾಸ್ಟ್‌ಫುಡ್, ಜಂಕ್‌ಫುಡ್, ತೈಲಯುಕ್ತ ಹಾಗೂ ಹೆಚ್ಚು ಉಪ್ಪು-ಸಕ್ಕರೆಯ ಆಹಾರ ಸೇವನೆಯು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವುದು.
- ನಿತ್ಯದ ಕೆಲಸದ ಒತ್ತಡ, ಹಣಕಾಸು ಅಥವಾ ವೈಯಕ್ತಿಕ ಜೀವನದ ಒತ್ತಡಗಳು ಹೃದಯದ ಮೇಲೆ ನೇರ ಪರಿಣಾಮ ಬೀರುತ್ತವೆ.
- ಇವು ರಕ್ತನಾಳಗಳನ್ನು ಕಿರಿದಾಗಿಸಿ ಹೃದಯಕ್ಕೆ ರಕ್ತಪ್ರವಾಹ ಕಡಿಮೆಮಾಡುತ್ತವೆ.
- ಇವು ನಿಯಂತ್ರಣದಲ್ಲಿರದಿದ್ದರೆ ಹೃದಯದ ಕಾರ್ಯವೈಖರಿಯನ್ನು ಹಾಳುಮಾಡುತ್ತವೆ.
- ಸಾಕಷ್ಟು ನಿದ್ರೆ ಪಡೆಯದಿದ್ದರೆ ಹಾರ್ಮೋನ್ ಅಸಮತೋಲನ ಉಂಟಾಗಿ ಹೃದಯದ ಮೇಲೆ ಒತ್ತಡ ಬೀರುತ್ತದೆ.
ಹಾಗಾದರೆ ಇದರ ಲಕ್ಷಣಗಳು ಯಾವುದು ಗೊತ್ತಾ?
ನಿಮ್ಮ ಹೃದಯ ಸರಿಯಾಗಿ ಕೆಲಸ ಮಾಡದಿದ್ದಾಗ, ಅದು ನಿಮ್ಮ ದೇಹಕ್ಕೆ ಸಾಕಷ್ಟು ರಕ್ತ, ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಕಳುಹಿಸುವಲ್ಲಿ ತೊಂದರೆ ನೀಡುತ್ತದೆ. ಹೃದಯ ಕಾಯಿಲೆಯ ಮೊದಲ ಲಕ್ಷಣಗಳಲ್ಲಿ ಎದೆ ನೋವು, ಉಸಿರಾಟದ ತೊಂದರೆ, ಕಾಲುಗಳಲ್ಲಿ ಊತ, ಆಯಾಸ ಮತ್ತು ತಲೆತಿರುಗುವಿಕೆ/ಮೂರ್ಛೆಗಳು ಕಾಣಿಸಿಕೊಳ್ಳುತ್ತವೆ. ಇವೆಲ್ಲವು ಆರಂಭಿಕ ಹಂತದಲ್ಲಿ ಕಂಡುಬರುತ್ತದೆ.

- ಹೃದಯ ವೇಗವಾಗಿ ಬಡಿಯುವುದು
- ಬೆವರುವುದು
- ಕುತ್ತಿಗೆ ನೋವು
- ಎದೆಯುರಿ ಅಥವಾ ಅಜೀರ್ಣ
- ವಾಕರಿಕೆ ಅಥವಾ ವಾಂತಿ
- ನಿದ್ರೆಯಲ್ಲಿ ತೊಂದರೆ
- ವ್ಯಾಯಾಮ ಅಸಹಿಷ್ಣುತೆ
- ಜ್ವರ
ಮಹಿಳೆಯರಲ್ಲಿ ಕಂಡುಬರುವ ಲಕ್ಷಣಗಳು ಪುರುಷರಿಗಿಂತ ಹೆಚ್ಚಾಗಿ ಭಿನ್ನವಾಗಿರುತ್ತವೆ. ಇವರಲ್ಲಿ ಸಾಮಾನ್ಯವಾಗಿ ಆಯಾಸ, ವಾಕರಿಕೆ ಮತ್ತು ಅಸ್ಪಷ್ಟ ಅಸ್ವಸ್ಥತೆ ಸೇರಿವೆ ಹಲವರಿಗೆ ಹೃದಯಸಮಸ್ಯೆ ತಕ್ಷಣ ಸಂಬವಿಸುವುದಿಲ್ಲ. ಹಂತ ಹಂತವಾಗಿ ಮೇಲಿನ ಲಕ್ಷಣಗಳು ಕಂಡುಬರುತ್ತವೆ.
ಇದನ್ನು ತಡೆಗಟ್ಟುವುದು ಹೇಗೆ?
- ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ತಡೆಗಟ್ಟುವ ಔಷಧವು ಹೆಚ್ಚು ಪರಿಣಾಮಕಾರಿ ಎಂದು ವೈದ್ಯಕೀಯ ಪುರಾವೆಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಆದರೆ ದಿನನಿತ್ಯದ ಜೀವನ ಶೈಲಿಯಲ್ಲಿ ಈ ಕೆಳಗಿನವುಗಳನ್ನು ಅನುಸರಿಸುವುದು ಉತ್ತಮ
- ಹಣ್ಣು, ತರಕಾರಿ, ಪೌಷ್ಟಿಕ ಧಾನ್ಯಗಳು ಹಾಗೂ ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸುವುದರಿಂದ ಮುಕ್ಕಾಲು ಭಾಗ ನಿಯಂತ್ರಿಸಬಹುದು.
- ದಿನಕ್ಕೆ ಕನಿಷ್ಠ 30 ನಿಮಿಷ ನಡೆದು ಅಥವಾ ಯೋಗಾಭ್ಯಾಸ ಮಾಡಿ. ಇದು ಹೃದಯದ ರಕ್ತ ಸಂಚಲನವನ್ನು ಸುಧಾರಿಸುತ್ತದೆ.
- ಧ್ಯಾನ, ಪ್ರಾಣಾಯಾಮ ಮತ್ತು ಯೋಗದ ಮೂಲಕ ಒತ್ತಡ ನಿಯಂತ್ರಣ ಸಾಧ್ಯ.
- ಧೂಮಪಾನ, ಮಧ್ಯಪಾನ ಗಳಿಂದ ದೂರವಿರುವುದು ಹೆಚ್ಚು ಉತ್ತಮ

ಹೃದಯ ಸಂಬಂಧಿ ಕಾಯಿಲೆಗಳು ನಿಧಾನವಾಗಿ ಬೆಳೆಯುವ, ಮತ್ತು ಗಂಭೀರ ಪರಿಣಾಮ ನೀಡುವ ಕಾಯಿಲೆಗಳಾಗಿವೆ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಧೂಮಪಾನದಿಂದ ದೂರವಿರುವುದು ಮತ್ತು ಮನಶಾಂತಿಯುತ ಜೀವನ ಇವು ಹೃದಯವನ್ನು ರಕ್ಷಿಸುವ ಶಕ್ತಿಯುತ ಔಷಧಗಳು. ಆರೋಗ್ಯ ಹದಗೆಡುವವರೆಗೆ ಕಾಯುವ ಬದಲು ಆರಂಭಿಕ ಪರಿಹಾರ ಕಂಡುಕೊಳ್ಳುವುದು ಉತ್ತಮ.



















