ಪಡಿತರ ಕಾರ್ಡ್ದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಗುಡ್ನ್ಯೂಸ್ ನೀಡಿದೆ. ನವೆಂಬರ್ 10ರವರೆಗೆ ಇದ್ದ ಇ-ಕೆವೈಸಿ ಅವಧಿಯನ್ನು ಕಾರ್ಡ್ದಾರರ ಹಿತದೃಷ್ಟಿಯಿಂದ ನವೆಂಬರ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಕಾರ್ಡ್ದಾರರು ಹತ್ತಿರದ ಪಡಿತರ ಅಂಗಡಿಗೆ ಭೇಟಿ ನೀಡಿ ಅಥವಾ ‘ಅನ್ನಸೇವೆ’ ಆಪ್ ಮೂಲಕವೂ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಇದುವೇ ಕೊನೆಯ ಗಡುವಾಗಿದ್ದು, ನವೆಂಬರ್ 30ರ ಒಳಗೆ ಕೆವೈಸಿ ಮಾಡಿಸದಿದ್ದರೆ ಮತ್ತೆ ದಿನಾಂಕ ವಿಸ್ತರಣೆ ಡೌಟ್ ಆಗಿದೆ. ಹೀಗಾಗಿ ಅಂತಿಮ ಗಡುವಿನೊಳಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.
















