ಬೆಂಗಳೂರು : ಆನ್‌ಲೈನ್ ವಂಚನೆಗಳನ್ನು ತಡೆಯುವ ದಿಸೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ನಕಲಿ ಗುರುತಿನ ಚೀಟಿಗಳ ಹಾವಳಿ ತಡೆಯಲು ಮತ್ತು ಸೈಬರ್ ವಂಚನೆಗಳನ್ನು ನಿಯಂತ್ರಿಸಲು ಮೊಬೈಲ್ ಸಿಮ್ ಕಾರ್ಡ್ ಗಳ ವಿತರಣಾ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಹೊಸ ಸಿಮ್ ಕಾರ್ಡ್ ಪಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ರಿಯಲ್ ಟೈಮ್ ವೇರಿಫಿಕೇಶನ್ ಕಡ್ಡಾಯ: ಇನ್ನು ಮುಂದೆ ಹೊಸ ಸಿಮ್ ಕಾರ್ಡ್ ಪಡೆಯುವಾಗ ಟೆಲಿಕಾಂ ಕಂಪನಿಗಳು ಕೇವಲ ಸಾಂಪ್ರದಾಯಿಕ ದಾಖಲೆಗಳ ಪರಿಶೀಲನೆಗೆ ಮಾತ್ರ ಸೀಮಿತವಾಗದೆ, ಸರ್ಕಾರದ ‘ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ ಫಾರ್ಮ್’ (Digital Intelligence Platform) ಮೂಲಕ ಗ್ರಾಹಕರ ಮಾಹಿತಿಯನ್ನು ರಿಯಲ್ ಟೈಮ್ ನಲ್ಲಿ ಪರಿಶೀಲಿಸುವುದು ಕಡ್ಡಾಯವಾಗಿದೆ.
ನಕಲಿ ಗುರುತಿನ ತಡೆ: ಅನುಮಾನಾಸ್ಪದ ಅಥವಾ ನಕಲಿ ಎಂದು ಕಂಡುಬರುವ ಗುರುತಿನ ದಾಖಲೆಗಳಿಗೆ ಹೊಸ ಮೊಬೈಲ್ ಸಂಪರ್ಕವನ್ನು ನೀಡಲಾಗುವುದಿಲ್ಲ. ಸೈಬರ್ ಅಪರಾಧಗಳು ಮತ್ತು ಹಣಕಾಸಿನ ವಂಚನೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಹೊಂದಬಹುದಾದ ಗರಿಷ್ಠ ಸಿಮ್ ಕಾರ್ಡ್ ಗಳ ಮಿತಿಯನ್ನು ಮುಂದುವರಿಸಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ 9 ಸಿಮ್ ಗಳನ್ನು ಪಡೆಯಲು ಮಾತ್ರ ಸಾಧ್ಯವಿದೆ.
ಏಕೆ ಇದು ಒಳ್ಳೆಯ ಕ್ರಮ?
ಕೆಲ ದಿನಗಳ ಹಿಂದಷ್ಟೇ ಗುಜರಾತ್ ನ ಅಹಮದಾಬಾದ್ ನಲ್ಲಿ “ಬಾಸ್ ಸ್ಕ್ಯಾಮ್” ಎಂಬ ಆನ್ ಲೈನ್ ವಂಚನೆ ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಬಾಸ್ ಹೆಸರಿನಲ್ಲಿ ಕರೆ ಮಾಡಿ 1.5 ಕೋಟಿ ರೂ. ವಂಚಿಸಿದ ಪ್ರಕರಣದ ಹಿಂದೆ ನಕಲಿ ಸಿಮ್ ಕಾರ್ಡ್ ಗಳ ಜಾಲವಿದೆ. ಸುಮಾರು 4,500 ನಕಲಿ ಸಿಮ್ ಕಾರ್ಡ್ ಗಳನ್ನು ವಂಚನೆಗೆ ಬಳಸಲಾಗಿದ್ದು, ಪಾಕಿಸ್ತಾನ, ಚೀನಾ ದೇಶಗಳೊಂದಿಗೆ ಲಿಂಕ್ ಇರುವುದು ಬಯಲಾಗಿದೆ. ಹಾಗಾಗಿ, ಸಿಮ್ ಕಾರ್ಡ್ ದೃಢೀಕರಣವು ಒಳ್ಳೆಯ ನಿರ್ಧಾರವಾಗಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ CSIR ಸಂಸ್ಥೆಯಲ್ಲಿ 43 ಹುದ್ದೆಗಳ ನೇಮಕಾತಿ : 63 ಸಾವಿರ ರೂ. ಸಂಬಳ



















