ಬೆಂಗಳೂರು : ಬೆಂಗಳೂರಿನಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಸ್ವಾ ಉದ್ಯೋಗ ಸಂಸ್ಥೆಯಾಗಿರುವ ರುಡ್‌ಸೆಟ್, ನಿರುದ್ಯೋಗಿಗಳಿಗೆ ಸಿಹಿ ಸುದ್ದಿಯನ್ನು ಹೊತ್ತು ತಂದಿದ್ದು, ಎಲೆಕ್ಟ್ರಿಕ್ ಮೋಟಾರ್ ರೀವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ಕುರಿತು ಉಚಿತ ತರಬೇತಿ ನೀಡುವ ಬಗ್ಗೆ ಅಧಿಸೂಚನೆ ಹೊರಡಿಸಿದೆ.
ಈ ತರಬೇತಿ 30 ದಿನಗಳ ಕಾಲ ನಡೆಯಲಿದ್ದು, ಈ ವೇಳೆ ಅಭ್ಯರ್ಥಿಗಳಿಗೆ ಉಚಿತವಾಗಿ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ತರಬೇತಿ ವೇಳೆ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ಪ್ರಾಯೋಗಿಕ ಜ್ಞಾನ ನೀಡಲಾಗುತ್ತದೆ. ತರಬೇತಿ ಪಡೆದುಕೊಂಡ ನಂತರ ಸ್ವಂತ ಉದ್ಯಮ ಆರಂಭಿಸಲು ಸಹ ಸಹಾಯವಾಗುವಂತೆ ಮಾರ್ಗದರ್ಶನ ಮತ್ತು ವ್ಯವಹಾರ ನಿರ್ವಹಣೆಯ ಸಲಹೆಯನ್ನು ನೀಡಲಾಗುತ್ತದೆ.

2026 ಮೇ 2ರಿಂದ ಮೇ 31ರವರೆಗೆ ನಡೆಯುವ ಈ ತರಬೇತಿಗೆ 18 ರಿಂದ 50 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದ ಬಿಪಿಎಲ್ ರೇಶನ್ ಕಾರ್ಡ್ ಅಥವಾ ನರೇಗಾ ಯೋಜನೆಯ ಜಾಬ್ ಕಾರ್ಡ್ ಹೊಂದಿದವರಿಗೆ ಇದು ಉತ್ತಮ ಅವಕಾಶವಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನೀಡಿರುವ ದೂರವಾಣಿ ಸಂಖ್ಯೆಗಳಾದ 9481778047, 9241482541 ಮತ್ತು 9481506564 ಗೆ ಸಂಪರ್ಕಿಸಬಹುದು. ಸೀಮಿತ ಆಸನಗಳಿರುವುದರಿಂದ ಬೇಗನೆ ಅರ್ಜಿ ಸಲ್ಲಿಸಲು ರುಡ್‌ಸೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಬಿ.ಇ ಮುಗಿಸಿದವರಿಗೆ ಗುಡ್ ನ್ಯೂಸ್ : NIMHANS ಸಂಸ್ಥೆಯಲ್ಲಿ ಎರಡು ಹುದ್ದೆಗಳ ನೇಮಕಾತಿ



















