ಇದೇ ಮೊದಲ ಬಾರಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಆಗಸದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ನಾಳೆ ದೇವೇಗೌಡರು 92ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಏರ್ ಇಂಡಿಯಾ ಮಾತ್ರ ನಿನ್ನೆಯೇ ಅವರ ಹುಟ್ಟ ಹಬ್ಬವನ್ನು ವಿಶೇಷವಾಗಿ ಆಚರಿಸಿದೆ. ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಲು ದೇವೇಗೌಡರು, ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ವೇಳೆ ವಿಮಾನದ ಆನ್ ಬೋರ್ಡ್ ಸಿಬ್ಬಂದಿ ಮಾಜಿ ಪ್ರಧಾನಿಗಳಿಗೆ ಅಚ್ಚರಿಯೊಂದನ್ನು ನೀಡಿದ್ದಾರೆ. ವಿಮಾನ 35 ಸಾವಿರ ಅಡಿ ಎತ್ತರಲ್ಲಿದ್ದಾಗ ಕೇಕ್ ತಂದು ದೇವೇಗೌಡರಿಗೆ ಹುಟ್ಟು ಹಬ್ಬದ ಶುಭಾಷಯ ಕೋರಿದ್ದಾರೆ. ಈ ಮೂಲಕ ಈ ಬಾರಿಯ ಹುಟ್ಟುಹಬ್ಬವನ್ನ ಮುಂಚಿತವಾಗಿಯೇ ಅಪರೂಪವಾಗಿ ಆಚರಿಸಿ ಸರ್ಫೈಸ್ ನೀಡಿದ್ದಾರೆ.

ಈ ಅಚ್ಚರಿಯ ಹುಟ್ಟುಹಬ್ಬವನ್ನು ಮೆಚ್ಚಿ ದೇವೇಗೌಡರು ಆನ್ ಬೋರ್ಡ್ ಸಿಬ್ಬಂದಿ ಪ್ರಗತಿ ಮತ್ತು ಅಯಾಜ್ ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ತಂದೆಗೆ ಈ ರೀತಿಯ ಕೊಡುಗೆ ಕೊಟ್ಟ ಏರ್ ಇಂಡಿಯಾ ಆಡಳಿತ ಮಂಡಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕೂಡ ಧನ್ಯವಾದ ಹೇಳಿದ್ದಾರೆ.



















