ಹಾವೇರಿ: ದಿನಗಳು ಕಳೆದಂತೆ ನಮ್ಮ ಸಮಾಜ ಆಧುನಿಕತೆ ಕಡೆ ವಾಲುತ್ತಿದೆ. ಕೃಷಿಯಲ್ಲೂ ಸಾಕಷ್ಟು ಬದಲಾಣೆಯಾಗಿದ್ದು, ಟ್ರ್ಯಾಕ್ಟರ್‌ನಿಂದ ಭೂಮಿಯನ್ನು ಉಳುಮೆ ಮಾಡಲು ಮುಂದಾಗಿದ್ದಾರೆ. ಆದರೆ ಎಲ್ಲಾದಕ್ಕೂ ಟ್ರ್ಯಾಕ್ಟರ್ ನಿಂದ ಆಗುವುದಿಲ್ಲ ಎಂಬುದು ರೈತರ ಅರಿವಿಗೆ ಬಂದಿದೆ.
ಹಾವೇರಿ ಜಿಲ್ಲೆಯಲ್ಲಿ ಬೆಳೆಗಳ ಮಧ್ಯೆ ಬೆಳೆದ ಕಸ ತೆಗೆಯಲು ಅನ್ನದಾತರು ಹರಸಾಹಸ ಪಡುತ್ತಿದ್ದಾರೆ. ಉತ್ತಮವಾಗಿ ಬೆಳೆದು ನಿಂತ ಬೆಳೆಗಳ ಮಧ್ಯೆ ಕಸ ಬೆಳೆದಿದೆ ಆದರೆ ಕಸ ತೆಗಯಲು ಟ್ರ್ಯಾಕ್ಟರ್ ಬಳಸಿದರೆ ಬೆಳೆ ನಾಶವಾಗುತ್ತದೆ.
ಕಸ ತೆಗೆಯಲು ಜೋಡೆತ್ತುಗಳು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕಸ ನಾಶಗೊಳಿಸಲು ರೈತರೆ ಜೋಡೆತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟು ಎಳೆಯುತ್ತಿದ್ದಾರೆ. ತಲಾ 500 ರೂ ಅಂತೆ ಮೂರು ಜನರಿಂದ ನೇಗಿಲು ಎಳೆಯುತ್ತಿದ್ದಾರೆ.



















