ಸನ್ ರೈಸರ್ಸ್ ಹೈದ್ರಾಬಾದ್ ತಂಡ ತಂಗಿದ್ದ ಹೋಟೆಲ್ ನಲ್ಲಿ ಅಗ್ನಿ ಪ್ರಮಾದ ಸಂಭವಿಸಿದೆ.
ಬಂಜಾರ ಹಿಲ್ಸ್ ನಲ್ಲಿರುವ ಪಂಚತಾರಾ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದೇ ಹೋಟೆಲ್ ನಲ್ಲೇ ಐಪಿಎಲ್ ನಲ್ಲಿ ಭಾಗಿಯಾಗಿರುವ ಎಸ್ ಆರ್ ಹೆಚ್ ತಂಡದ ಆಟಗಾರರು ತಂಗಿದ್ದರು. ಆದರೆ, ಈ ಬೆಂಕಿ ಅವಘಡದಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಹೋಟೆಲ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಹೋಟೆಲ್ ನ ಮೊದಲ ಮಹಡಿಯಲ್ಲಿರುವ ಸ್ಪಾದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಹೋಟೆಲ್ ಸಿಬ್ಬಂದಿ ಕೂಡಲೇ ಈ ಪರಿಸ್ಥಿತಿಯನ್ನು ನಿಭಾಯಿಸಿದ್ದು, ದೊಡ್ಡ ಅನಾಹುತವೊಂದನ್ನು ತಪ್ಪಿದೆ ಎನ್ನಲಾಗಿದೆ.