ಬೆಂಗಳೂರು: ಪಾನಿಪೂರಿ ತಿನ್ನುವ ವೇಳೆ ಯುವಕರ ನಡುವೆ ಗಲಾಟೆ ನಡೆದಿದೆ. ಮೂರು ದಿನದ ಬಳಿಕ ಯುವಕನೊಬ್ಬ ಮನೆಯಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯ ಅರಕೆರೆಯಲ್ಲಿ ನಡೆದಿದೆ.
ಬಿಹಾರದ ಮೂಲದ ಭೀಮಕುಮಾರ (25) ಸಾವನ್ನಪ್ಪಿದ ಯುವಕ. ಸಾವನ್ನಪ್ಪಿದ ಭೀಮಾಕುಮಾರ್ ಮನೆಗೆ ಸ್ನೇಹಿತರು ಬಂದಿದ್ದರು. ಮನೆಗೆ ಬಂದಿದ್ದ ಸ್ನೇಹಿತರನ್ನು ಕರೆದುಕೊಂಡು ಪಾನಿಪೂರಿ ತಿನ್ನಲು ಹೋಗಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಸಲ್ಮಾನ್ ಎನ್ನುವ ಯುವಕನ ಜೊತೆಗೆ ಗಲಾಟೆ ನಡೆದಿದೆ.
ಗಲಾಟೆಯಲ್ಲಿ ಸಲ್ಮಾನ್ ಭೀಮಾಕುಮಾರ್ ಕತ್ತಿನ ಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಸ್ನೇಹಿತರು ಯುವಕನನ್ನು ಮನೆಗೆ ಕರೆದುಕೊಂಡು ಹೋಗಿ ಮಲಗಿಸಿ ಆರೈಕೆ ಮಾಡಿದ್ದಾರೆ. ಆದರೆ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆತ ಬಿದ್ದಿದ್ದರಿಂದ ಮೂರು ದಿನದ ಬಳಿ ಯುವಕ ಭೀಮಾಕುಮಾರ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.



















