ಬೆಂಗಳೂರು: ಕಂಪನಿ, ಉದ್ಯೋಗದ ಬದಲಾವಣೆಯಿಂದಾಗಿ ಹೆಚ್ಚಿನ ಜನರ ಪಿಎಫ್ ಮೊತ್ತವು ಹಲವು ಖಾತೆಗಳಲ್ಲಿ ಜಮೆಯಾಗಿರುತ್ತದೆ. ಈ ಎಲ್ಲ ಮೊತ್ತವನ್ನು ಒಂದೇ ಖಾತೆಗೆ ಅಥವಾ ಈಗ ಕೆಲಸ ಮಾಡುತ್ತಿರುವ ಕಂಪನಿ ಖಾತೆಗೆ (EPF Accounts ) ವರ್ಗಾವಣೆ ಮಾಡಬಹುದು. ಅದರಲ್ಲೂ, ಆನ್ ಲೈನ್ ಮೂಲಕವೇ ಸುಲಭವಾಗಿ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಹೇಗೆ ಅಂತೀರಾ? ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ.
• ಮೊದಲಿಗೆ ಇಪಿಎಫ್ಒದ https://unifiedportal-mem.epfindia.gov.in/memberinterface/ ವೆಬ್ ಸೈಟ್ ಗೆ ಭೇಟಿ ನೀಡಬೇಕು
• ಯುಎಎನ್ ಹಾಗೂ ಪಾಸ್ ವರ್ಡ್ ನಮೂದಿಸಿ, ಲಾಗಿನ್ ಆಗಬೇಕು
• ‘one member and one EPF account’ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು
• ಹೊಸ ವಿಂಡೋದಲ್ಲಿ ಯುಎಎನ್ ಸೇರಿ ವಿವಿಧ ಮಾಹಿತಿಯನ್ನು ಒದಗಿಸಬೇಕು
• ಜನರೇಟ್ ಒಟಿಪಿ ಮೇಲೆ ಕ್ಲಿಕ್ ಮಾಡಿದ ಬಳಿಕ ಲಭಿಸಿದ ಒಟಿಪಿ ನಮೂದಿಸಬೇಕು
• ಹಳೆಯ ಕಂಪನಿಗಳ ವಿವರ ಸೇರಿ ಹಲವು ಮಾಹಿತಿ ನೀಡಬೇಕು
• ಮಾಹಿತಿ ಒದಗಿಸಿದ ಬಳಿಕ ಸಬ್ ಮಿಟ್ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು
• ಕೆಲ ದಿನಗಳ ಬಳಿಕ ಹಳೆಯ ಖಾತೆಗಳ ಮೊತ್ತವು ಹೊಸ ಖಾತೆಗೆ ಜಮೆಯಾಗುತ್ತದೆ
ಹೀಗೆ ಆನ್ ಲೈನ್ ಮೂಲಕವೇ ಸುಲಭವಾಗಿ ಪಿಎಫ್ ಮೊತ್ತವನ್ನು ಒಂದೇ ಖಾತೆಗೆ ಜಮೆ ಮಾಡಬಹುದಾಗಿದೆ. ಈಗ ಕೆಲಸ ಮಾಡುತ್ತಿರುವ ಕಂಪನಿಯ ಪಿಎಫ್ ಖಾತೆಗೇ ಹಣ ಜಮೆ ಮಾಡಿಕೊಳ್ಳುವುದು ಒಳಿತು. ಆಗ ಪ್ರತಿ ತಿಂಗಳಿನ ಪಿಎಫ್ ಮೊತ್ತ ಜಮೆಯಾಗುತ್ತ ಹೋಗುತ್ತದೆ. ಹಳೆಯ ಮೊತ್ತವೂ ಇದಕ್ಕೇ ಜಮೆಯಾಗುತ್ತದೆ. ಇದರಿಂದ ವರ್ಷಕ್ಕೆ ಒಳ್ಳೆಯ ಬಡ್ಡಿಯ ಲಾಭವೂ ಸಿಗುತ್ತದೆ.
ಇದನ್ನೂ ಓದಿ: ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ ಅನಾವರಣ : ಜ.2 ರಂದು ಬೆಲೆ ಪ್ರಕಟ, ಇಂದಿನಿಂದಲೇ ಬುಕಿಂಗ್ ಆರಂಭ



















