ಮಂಗಳೂರು : ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್ ಕುಸಿದು ಇನ್‌ಸ್ಟಾ ಮಾರ್ಟ್ ಉದ್ಯೋಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಂಗಳೂರಿನ ಕುಂಟಿಕಾನ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ಬೆಳಲು ನಿವಾಸಿ ನೌಫಾಲ್ (28) ಮೃತ ದುರ್ದೈವಿ. ನೌಫಾಲ್ ಇನ್‌ಸ್ಟಾ ಮಾರ್ಟ್ ಸಪ್ಲೈ ಪಾಯಿಂಟ್‌ನಲ್ಲಿ ದಿನಸಿ ವಸ್ತುಗಳನ್ನು ಲಿಫ್ಟ್‌ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ದುರ್ಘಟನೆಯಾಗಿದೆ.
ವಸ್ತುಗಳನ್ನು ಸಾಗಿಸುತ್ತಿದ್ದಗ ಏಕಾಏಕಿ ಲಿಫ್ಟ್ ಕುಸಿದಿದ್ದು, ಲಿಫ್ಟ್‌ನಲ್ಲಿ ಸಿಲುಕಿ ನೌಫಾಲ್ ಸಾವಿಗೀಡಾಗಿದ್ದಾರೆ. ದುರಂತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಧಗಧಗನೆ ಹೊತ್ತಿ ಉರಿದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ AC ಕೋಚ್ – ತಪ್ಪಿದ ಭಾರೀ ಅನಾಹುತ!



















