ಚಾಮರಾಜನಗರ: ದಯಾಮರಣಕ್ಕೆ ಅನುಮತಿ ಕೋರಿ ವೃದ್ಧೆಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಘಟನೆ ಚಾಮರಾಜನಗರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಮಲೆಮಹದೇಶ್ವರ ಬೆಟ್ಟ ಅರಣ್ಯದ ಮೆದಗನಾಣೆ ಗ್ರಾಮದ ಕೆಂಪನಮ್ಮ ಸಿಎಂಗೆ ಪತ್ರ ಬರೆದ ವೃದ್ಧೆ. ವಿದ್ಯುತ್ ಹಾಗೂ ಗ್ರಾಮಕ್ಕೆ ಮೂಲ ಸೌಲರ್ಯ ಕಲ್ಪಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳಿಂದ ಭರವಸೆ ಸಿಗದ ಹಿನ್ನಲೆ, ಬೇಸತ್ತ ವೃದ್ಧೆ ದಯಾಮರಣಕ್ಕೆ ಅನುಮತಿ ಕೋರಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಪಾಲಾರ್ ಸೇರಿದಂತೆ ಕೆಲವು ಗ್ರಾಮಗಳಿಗೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಹಾಗಾಗಿ ನಾವು ಕತ್ತಲೆಯಲ್ಲಿದ್ದೇವೆ ಶೀಘ್ರ ನಮ್ಮ ಗಾಮಕ್ಕೂ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ; ಟ್ರಾಕ್ಟರ್-ಮಿನಿ ಬಸ್ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಮಹಿಳೆ ಸಾವು!


















