ಚಿಕ್ಕೋಡಿ : ವಾಯುವ್ಯ ಕರ್ನಾಟಕ ಸಾರಿಗೆ ಅಥಣಿ ಘಟಕದ KA23 F1095 ನಂಬರ್‌ನ ಬಸ್ ಚಾಲಕ ಮತ್ತು ನಿರ್ವಾಹಕರು ಖಾಸಗಿ ಪೆಟ್ರೋಲ್ ಬಂಕ್‌ಗೆ ಬಸ್ ನುಗ್ಗಿಸಿ ಕಾರು ಚಾಲಕನಿಗೆ ಆವಾಜ್ ಹಾಕಿದ ಘಟನೆ ಚಿಕ್ಕೋಡಿ ಉಪವಿಭಾಗದಲ್ಲಿ ನಡೆದಿದೆ.

ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಕಾರು ಚಾಲಕ ನಿಧಾನವಾಗಿ ಸಾಗುತ್ತಿದ್ದ ವೇಳೆ, ಹಿಂಬದಿಯಿಂದ ಹಾರ್ನ್ ಹಾಕಿದರೂ ಸೈಡ್ ನೀಡಲಿಲ್ಲವೆಂದು ಬಸ್ ಚಾಲಕ ತಕರಾರು ತೆಗೆದುಕೊಂಡಿದ್ದಾನೆ. ಮಾತಿನ ಚಕಮಕಿ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ನಂತರ ತನ್ನ ಮಾರ್ಗ ಬದಲಿಸಿಕೊಂಡು ಕಾಗವಾಡ-ಸಿರಗುಪ್ಪಿ ರಸ್ತೆಯ ಜಿಯೋ ಪೆಟ್ರೋಲ್ ಬಂಕ್‌ಗೆ ಬಸ್ ನುಗ್ಗಿಸಿ ಚಾಲಕ ಆವಾಜ್ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗಿದ್ದು, ಇವರು ಚಾಲಕರೋ ಅಥವಾ ರೌಡಿಗಳೋ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಕೇಳಿಬರುತ್ತಿದೆ.
ಈ ಮೂಲಕ ಚಿಕ್ಕೋಡಿ ಉಪವಿಭಾಗದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿ ಗಲಾಟೆಗಳು ಹೆಚ್ಚುತ್ತಿರುವುದೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಘಟನೆಯ ಕುರಿತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಧೋನಿ ಫಿಟ್ನೆಸ್ ಅಪ್ಡೇಟ್ ; ತಂಡದೊಂದಿಗೆ ಪ್ರಯಾಣ ಬೆಳೆಸಿದರೂ ಆಡುವುದು ಅನುಮಾನ!



















