ಚೀನಾ ನಂಬಿ ಕೆಟ್ಟುಬಿಡ್ತಾ ಪಾಕಿಸ್ತಾನ. ಹೌದು! ಭಾರತ-ಪಾಕ್ ಗಡಿಯಲ್ಲಿ ಶತ್ರುಗಳ ಚಲನವಲನಗಳ ಮೇಲೆ ನಿಗಾ ಇಡಲು ಪಾಕ್ ಏರ್ ಡಿಫೆನ್ಸ್ ಸಿಸ್ಟಮ್ ಅಳವಡಿಸಿಕೊಂಡಿದೆ.
ಆದರೆ, ಭಾರತದ ರಫೇಲ್, ಸುಖೋಯ್ ಯುದ್ಧ ವಿಮಾನಗಳು ಲೀಲಾಜಾಲವಾಗಿ ಪಾಕ್ ಒಳನುಗ್ಗಿ ರಣಬೇಟೆ ಆಡಿ ಮುಗಿಸಿದರೂ ಪಾಕ್ ಗೆ ಇದರ ಅರಿವೇ ಆಗಿಲ್ಲ ಅನ್ನೋದು ವಿಪರ್ಯಾಸ. ಹಾಗಂತ ಈ ತಪ್ಪಿಗೆ ಕಾರಣ ಚೀನಾ.
ಅಸಲಿಗೆ ಪಾಕ್ ಅಳವಡಿಸಿಕೊಂಡಿರುವ ಏರ್ ಡಿಫೆನ್ಸ್ ಸಿಸ್ಟಮ್ ಅಂದ್ರೆ ಶತ್ರು ರಾಷ್ಟ್ರಗಳ ವಿಮಾನಗಳು ಗಡಿ ಪ್ರವೇಶಿಸಿದರೆ ಅದನ್ನು ಗುರುತಿಸಿ ಹೊಡೆದುರುಳಿಸುವ ತಾಕತ್ತು ಹೊಂದಿರುವಂಥ ಅಸ್ತ್ರ. ಆದರೆ ಪಾಕಿಸ್ತಾನ ನಿಯೋಜಿಸಿಕೊಂಡಿರುವ ಚೀನಾ ಮೇಡ್ ನ ಹೆಚ್ ಕ್ಯೂ 9 ಡಿಫೆನ್ಸ್ ಸಿಸ್ಟಂ ನಯಾ ಪೈಸೆ ಕೆಲಸ ಮಾಡಿಲ್ಲ ಎನ್ನುವುದು ಇದೀಗ ಸಾಬೀತಾಗಿದೆ. ಭಾರತ ಒಳನುಗ್ಗಿ ಹೊಡೆಯುತ್ತಿದ್ದರೂ ಈ ಸಿಸ್ಟಮ್ ಅದನ್ನು ಗ್ರಹಿಸಿಲ್ಲ, ಎತಚ್ಚರಿಸಿಲ್ಲ ಮತ್ತು ಪ್ರತಿದಾಳಿ ನಡೆಸುವ ಗೋಜಿಗೂ ಹೋಗಿಲ್ಲ.
ಭಾರತದ ಯುದ್ಧ ವಿಮಾನಗಳು ಪಾಕಿಸ್ತಾನದ ಒಳಗೆ 15 ಕಿಲೋಮೀಟರ್ ನುಗ್ಗಿ ಕಾರ್ಯಾಚರಣೆ ನಡೆಸಿದರೂ ಆ ದೇಶದ ಯೋಧರು ಗಡದ್ ಮಲಗಿದ್ದು, ಅಲ್ಲಿನ ಸೇನೆಯ ವೈಫಲ್ಯವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದೆ.