ಭಾರತದ ಬಂಗಾಳ ಕೊಲ್ಲಿಗೆ ಅಪ್ಪಳಿಸಿದ ದಿತ್ವಾ ಸೈಕ್ಲೋನ್‌ನಿಂದ ಪುದುಚೇರಿ, ತಮಿಳುನಾಡಲ್ಲಿ ಮಳೆ ಅಬ್ಬರ ಜೋರಾಗಿದೆ. ಸದ್ಯ ಬೆಂಗಳೂರಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇನ್ನು ದಿತ್ವಾ ಚಂಡಮಾರುತವು ಸೋಮವಾರ ಮಧ್ಯಾಹ್ನದ ವೇಳೆಗೆ ಉತ್ತರ ತಮಿಳುನಾಡು- ಪುದುಚೇರಿ ಕರಾವಳಿಯಲ್ಲಿ ಉತ್ತರಕ್ಕೆ ಚಲಿಸುವ ನಿರೀಕ್ಷೆಯಿದೆ. ಬಿರುಗಾಳಿ ದುರ್ಬಲಗೊಳ್ಳುತ್ತಿದ್ದು, ಚಂಡಮಾರುತ ಆಳವಾದ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗಲಿದೆ. ಇದರಿಂದ ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಲ್ಲಿ ದ್ವಿತ್ವಾಹ್‌ನಿಂದ ವೀಪರೀತ ಚಳಿ ಹೆಚ್ಚಿಸಿತ್ತು. ತಮಿಳುನಾಡಿಗೆ ಸೈಕ್ಲೋನ್ ಅಪ್ಪಳಿಸಿದರಿಂದ ಸಿಲಿಕಾನ್ ಸಿಟಿ ಥಂಡಾಮಯವಾಗಿತ್ತು. ದಟ್ಟ ಮೋಡದ ಮಧ್ಯೆ ಹುದುಗಿಹೋಗಿತ್ತು. ಇದೀಗ 16 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಶ್ರೀಲಂಕಾವನ್ನು ನಲುಗಿಸಿದ ದಿತ್ವಾಹ್ ಸೈಕ್ಲೋನ್
ಶ್ರೀಲಂಕಾವಂತೂ ದಿತ್ವಾಹ್ ಚಂಡಮಾರುತಕ್ಕೆ ನಲುಗಿ ಹೋಗಿದೆ. ಭೀಕರ ಸೈಕ್ಲೋನ್ಗೆ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 200-250ಕ್ಕೂ ಜನ ಕಾಣೆಯಾದ ಕುರಿತು ವರದಿಯಾಗಿದೆ. ಭಾರಿ ಮಳೆ, ಗಾಳಿ, ಪ್ರವಾಹ, ಭೂಕುಸಿತ ಅವಾಂತರದಿಂದ ಲಕ್ಷಾಂತರ ಜನರು ಮನೆ ಕಳ್ಕೊಂಡು ಬೀದಿಗೆ ಬಿದ್ದಿದ್ದಾರೆ. ನಿರಾಶ್ರಿತರ ರಕ್ಷಣೆಗೆ ನಿರಂತರ ಕಾರ್ಯಾಚರಣೆ ನಡೆಯುತ್ತಲೇ ಇದೆ. ಸದ್ಯ ಶ್ರೀಲಂಕಾ ಸರ್ಕಾರ ತುರ್ತುಸ್ಥಿತಿ ಘೋಷಿಸಿದೆ. ಭಾರತವು ಶ್ರೀಲಂಕಾಕ್ಕೆ ನೆರವಿನಸ್ತ್ರ ಬೀಸಿದೆ.
ಇದನ್ನೂ ಓದಿ : ಬಳ್ಳಾರಿ | ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ಬಾಲಕ ಸಾವು..!



















