ಕೆಎಂಎಫ್ ಮೊಸರು ದರ ಹೆಚ್ಚಳದ ವಿರುದ್ಧ ವ್ಯಕ್ತವಾದ ಭಾರಿ ಸಾರ್ವಜನಿಕ ಆಕ್ರೋಶಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ಕೆಜಿ ಮೊಸರಿಗೆ ಬರೋಬ್ಬರಿ 14 ರೂಪಾಯಿ ಏರಿಕೆ ಮಾಡಿದ್ದ ಕೆಎಂಎಫ್ ನಿರ್ಧಾರದಿಂದ ಸಾರ್ವಜನಿಕ ಗ್ರಾಹಕರಿಗೆ ಹಾಗೂ ಹೋಟೆಲ್ ಮಾಲೀಕರಿಗೆ ಭಾರಿ ತೊಂದರೆಯಾಗಿತ್ತು.
ಈ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ತಕ್ಷಣ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು, ಮೊಸರಿನ ದರವನ್ನು 2 ರೂಪಾಯಿ ಇಳಿಕೆ ಮಾಡುವಂತೆ ಕೆಎಂಎಫ್ಗೆ ಖಡಕ್ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆ ಹಿನ್ನೆಲೆಯಲ್ಲಿ ನಾಳೆಯಿಂದಲೇ ಪರಿಷ್ಕೃತ ದರ ಇಳಿಕೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ನಾಳೆ ಅಧಿಕೃತ ಸುದ್ದಿಗೋಷ್ಠಿ ನಡೆಸಿ ಈ ದರ ಇಳಿಕೆಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.

















