ಬೆಂಗಳೂರು : ಕೆಪಿಎಸ್ಸಿ ಹಗರಣ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಶಿವಶಂಕರಪ್ಪ ಸಂಬಂಧಿಕರ ಮನೆ ಹಾಗೂ ಆರ್‌ಟಿಒ ಇನ್ಸ್‌ಪೆಕ್ಟರ್ ರಾಕೇಶ್ ಅವರ ನಿವಾಸದಲ್ಲೂ ಸಿಐಡಿ ಸರ್ಚ್ ನಡೆಸಿದೆ. ಯಾವುದೇ ಕ್ಷಣದಲ್ಲಿ ಶಿವಶಂಕರಪ್ಪ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದೇ ಪ್ರಕರಣದಲ್ಲಿ ಸಿಐಡಿ ಕಸ್ಟಡಿಯಲ್ಲಿರುವ ಬಸವರಾಜ್ ಕನ್ನಾಳೆಯ ಮತ್ತೊಂದು ಕಳ್ಳಾಟವೂ ಬಯಲಾಗಿದೆ. ಎರಡು ಮೊಬೈಲ್‌ಗಳು ಹಾಗೂ ಒಂದು ಟ್ಯಾಬ್ ಅನ್ನು ನಾಶ ಮಾಡಿ, ಅವುಗಳನ್ನು ಮೈಸೂರು ರಸ್ತೆಯ ಕಾಲುವೆಗೆ ಎಸೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮತ್ತೊಂದೆಡೆ ಕೆಪಿಎಸ್ಸಿ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ. ಎರಡು ದಿನಗಳಿಂದ ಆನ್‌ಲೈನ್ ಅರ್ಜಿ ಸಲ್ಲಿಕೆಯಲ್ಲಿ ಸಮಸ್ಯೆ ಎದುರಾಗಿದ್ದು, ಕೆಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವೂ ಸಮೀಪಿಸಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ : ಶತಕದತ್ತ ಸಾಗುತ್ತಿದ್ದ ಗಿಲ್‌ಗೆ ಅಭಿಷೇಕ್ ಶರ್ಮಾ ಶಾಕ್ ; ರೋಚಕ ಪಂದ್ಯದಲ್ಲಿ ಅಮೃತಸರ ಸೂರ್ಮಾಸ್‌ಗೆ ಜಯ!

















