ಬೆಂಗಳೂರು : ನಗರದಲ್ಲಿ BMTC ದೈನಂದಿನ ಪಾಸ್ ವಿತರಣೆಯಲ್ಲಿ ಭಾರೀ ಎಡವಟ್ಟಾಗಿರುವ ಘಟನೆ ಬೆಳಕಿಗೆ ಬಂದಿದೆ. ಬಿಎಂಟಿಸಿ ಕಂಡಕ್ಟರ್ ಮಹಿಳಾ ಪ್ರಯಾಣಿಕರಿಗೆ ಪುರುಷರ ಪಾಸ್ ವಿತರಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ತಪ್ಪು ಪಾಸ್ ಬದಲಿಸಿ ಕೊಡುವಂತೆ ಕೇಳಿದ ಪ್ರಯಾಣಿಕರಿಗೆ “FE ಮೇಲೆ ಬರೆದುಕೊಳ್ಳಿ” ಎಂದು ಟಿಸಿ ಸೂಚನೆ ನೀಡಿರುವುದಾಗಿ ಹೇಳಲಾಗಿದ್ದು, ಇದರಿಂದ ಪ್ರಯಾಣಿಕರು ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲ ಪಾಸ್‌ಗಳಲ್ಲಿ ಸೀಲ್ ಹಾಗೂ ಸಿಗ್ನೇಚರ್ ಕೂಡ ಇಲ್ಲದಿರುವುದು ಮತ್ತಷ್ಟು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ತಪ್ಪು ಮಾಹಿತಿಯಿರುವ ಪಾಸ್‌ಗಳನ್ನು ಮಾನ್ಯವಲ್ಲ ಎಂದು ಹೇಳಿ ಮತ್ತೆ ಟಿಕೆಟ್ ಪಡೆಯುವಂತೆ ಕಂಡಕ್ಟರ್ ಸೂಚಿಸಿರುವುದಾಗಿ ಪ್ರಯಾಣಿಕರು ದೂರಿದ್ದಾರೆ.
ಪ್ರತಿದಿನ ಕನಿಷ್ಠ 10 ಪಾಸ್ ಇದೇ ರೀತಿಯಲ್ಲಿ ಇರುತ್ತವೆ ಎಂದು ಕೆಲ ಸಿಬ್ಬಂದಿಯೇ ಸ್ಪಷ್ಟಪಡಿಸಿರುವ ಮಾಹಿತಿ ಲಭ್ಯವಾಗಿದ್ದು, ಬಿಎಂಟಿಸಿ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ : ಕ್ರಿಸ್ ಗೇಲ್ ಮಹಾದಾಖಲೆ ಉಡೀಸ್ : IPLನಲ್ಲಿ ವೈಭವ್ ಸೂರ್ಯವಂಶಿ ಹೊಸ ಇತಿಹಾಸ!



















